ಕುಮಟಾ : ದಿನಾಂಕ 07/11/2023 ರಂದು ಕುಮಟಾದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ತಾಲೂಕಿನ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಪ್ರಿಯಾ ಶಂಕರ್ ಗೌಡ- 100 ಮೀಟರ್ ಓಟ, 200 ಮೀ.
ಓಟ ಹಾಗೂ 400 ಮೀ. ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅತ್ಯಮೋಘ ಪ್ರದರ್ಶನ ನೀಡಿ ವೈಯಕ್ತಿಕ ವೀರಾಗ್ರಣಿ ಯೊಂದಿಗೆ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.ಹಾಗೆ ಇದೇ ಶಾಲೆಯ ಮತ್ತೋರ್ವ ವಿದ್ಯಾರ್ಥಿನಿ
ರುಚಿ ಎಂ.ನಾಯ್ಕ ಗುಂಡು ಎಸೆತ ಪ್ರಥಮ, ಚಕ್ರ ಎಸೆತ ತೃತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಕ್ರೀಡಾ ಸಾಧನೆ ಮೂಲಕ ಶಾಲೆಗೂ ಜಿಲ್ಲೆಗೂ ಕೀರ್ತಿ ತಂದಿರುವ
ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಶಾಲೆಯಲ್ಲಿ ಓದುತ್ತಿರುವ ಈ ಎರಡೂ ವಿದ್ಯಾರ್ಥಿಗಳ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಓದಿನ ಜೊತೆಜೊತೆಗೆ ಕ್ರಿಡೆಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಮುಂದೆ ಸಾಗುತ್ತಿರುವುದು ಅಥ್ಲೆಟಿಕ್ಸ್ ನಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾನಿಕೇತನ ಮೂರೂರು ಕಲ್ಲಬ್ಬೆ ಸಂಸ್ಥೆಯ ಕಾರ್ಯಧ್ಯಕ್ಷರಾದ ಆರ್. ಜಿ. ಭಟ್ಟ ಹಾಗೂ ಸರ್ವ ಸದಸ್ಯರು, ಪ್ರಾಚಾರ್ಯರು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ತುಂಬು ಹೃದಯದಿಂದ ಅಭಿನಂದಿಸಿದೆ.
Leave feedback about this