ಹೊನ್ನಾವರ : ತಾಲ್ಲೂಕಿನ ಹಳದಿಪುರ ಅಗ್ರಹಾರದ ಯುವಕ ಪ್ರಮೋದ ರಾಮಾ ಗೌಡ ದಿನಾಂಕ : 23-1-2024 ರಂದು ಕೂಲಿ ಕೆಲಸಕ್ಕೆಂದು ನಸುಕಿಜಾವ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕುಮಟಾದ ಮಾಸ್ತಿಕಟ್ಟೆ ಸರ್ಕಲ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಇದೀಗ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತಗೊಂಡ ಸಹೃದಯಿಗಳು ಅವರನ್ನು ಕಾರವಾರ ಕಿಮ್ಸ್ ಗೆ ದಾಖಲು ಮಾಡಿದ್ದರು. ಆದರೆ ಅಲ್ಲಿನ ವೈದ್ಯರು ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ ಎಂದು ತಕ್ಷಣ ಸ್ಥಳಾಂತರಿಸಲು ಸೂಚಿಸಿದಾಗ ಅವರನ್ನು ಮಣಿಪಾಲ ಆಸ್ಪತ್ರೆ ದಾಖಲು ಪಡಿಸಲಾಯಿತು.
ಆರ್ಥಿಕ ನೆರವು ನೀಡಲು ಪ್ರಮೋದ ರಾಮ ಗೌಡ ರವರ ಸಹೋದರಿ ಬ್ಯಾಂಕ್ ವಿವರ :
ಕೆನರಾ ಬ್ಯಾಂಕ್ ಹಳದಿಪುರ ಶಾಖೆ
ಖಾತೆದಾರರ ಹೆಸರು: ಸುಜಾತಾ ರಾಮಾ ಗೌಡ
ಖಾತೆ ಸಂಖ್ಯೆ: 03172210040888
IFSC Code: CNRB0010317
Phonepe, Gpay No: 7483095619
ಪ್ರಾಣಾಪಯದಿಂದ ಪಾರಾದರೂ ಅಪಘಾತದಲ್ಲಿ ಒಂದು ಕಾಲು ಮೊಣಕಾಲಿನ ಕೆಳಭಾಗದಲ್ಲಿ ಸಂಪೂರ್ಣ ಛಿದ್ರವಾದ ಕಾರಣ ಶಸ್ತ್ರಚಿಕಿತ್ಸೆ ಮೂಲಕ ಕಾಲನ್ನೇ ಕತ್ತರಿಸಬೇಕಾದ ಕರುಣಾಜನಕ ಸ್ಥಿತಿ ಎದುರಾಯಿತು. ಇದೀಗ ಆತನ ಚಿಕಿತ್ಸಾ ವೆಚ್ಚ ಅಂದಾಜು 6 ರಿಂದ 8 ಲಕ್ಷದ ವರೆಗೆ ಆಗಬಹುದೆಂದು ವೈದ್ಯರು ತಿಳಿಸಿದ್ದಾರೆ. ಆದರೆ ತೀರಾ ಬಡ ಕುಟುಂಬದವರಾದ ಇವರಿಗೆ ಅಷ್ಟೊಂದು ದುಡ್ಡು ಹೊಂದಿಸುವುದು ಕಷ್ಟವಾಗಿ ದಿಕ್ಕೇ ತೋಚದಂತಾಗಿದ್ದಾರೆ.
ಕಾಲು ಕತ್ತರಿಸಿರುವುದರಿಂದ ಆಯುಷ್ಮಾನ್ ಯೋಜನೆಯಡಿ ಸರಕಾರದ ನೆರವೂ ಲಭಿಸದು. ಆದ್ದರಿಂದ ಕುಟುಂಬವು ಈಗ ದಾನಿಗಳ ಮೊರೆ ಹೋಗಿದ್ದು ಸಹೃದಯಿಗಳು ಯುವಕನ ಕುಟುಂಬಸ್ಥರ ಖಾತೆಗೆ ಹಣ ಹಾಕಿ ಧನ ಸಹಾಯ ಮಾಡುವಂತೆ ವಿನಂತಿಸಿದ್ದಾರೆ. ಸಹೃದಯರ ಸಹಾಯ ಅವರ ಬದುಕಿಗೊಂದು ಆಸರೆಯಾಗಬಹುದು.
ಕೆನರಾ ಬ್ಯಾಂಕ್ ಹಳದಿಪುರ ಶಾಖೆ
ಖಾತೆದಾರರ ಹೆಸರು: ಸುಜಾತಾ ರಾಮಾ ಗೌಡ
ಖಾತೆ ಸಂಖ್ಯೆ: 03172210040888
IFSC Code: CNRB0010317
Phonepe, Gpay No: 7483095619