ಕುಮಟಾ; ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ತಾಲೂಕಿನ ಗೋಕರ್ಣದ ಓಂ ಬೀಚ್ ನಲ್ಲಿ ದೋಣಿ ಬೈಲ್ ಕುಜನಿ ಹೊಟೇಲ್ ಮಾಲೀಕರ ಸಂಘದ ಬ್ಯಾನರ್ ನಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ 155 ನೇ ಜಯಂತಿಯ ನಿಮಿತ್ತ ಭಾರತ ಸರ್ಕಾರ ಹಮ್ಮಿಕೊಂಡಿರುವ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಮಸ್ತೆ ಕೆಫೆ ಮಾಲೀಕರಾದ ಗೋವಿಂದ ಗೌಡರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಂಜಾನೆ ಏಳು ಗಂಟೆಯಿಂದ ಪ್ರಾರಂಭವಾದ ಸ್ವಚ್ಛತಾ ಅಭಿಯಾನ 11 ಗಂಟೆ ವರೆಗೂ ನಡೆಯಿತು. ಓಂ ಬೀಚ್ ನ ಪಾರ್ಕಿಂಗ್ ಏರಿಯಾದ ಸುತ್ತಮುತ್ತಲು ಮತ್ತು ರಸ್ತೆಯಿಂದ ಸಮುದ್ರ ಸೇರುವ ಮಾರ್ಗ ಹಾಗೂ ಕಡಲ ಕಿನಾರೆಯ ಉದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಕವರ್ ಸೇರಿದಂತೆ ಇನ್ನಿತರ ನಿರುಪಯುಕ್ತ ವಾಗಿ ಬಿದ್ದಿದ್ದ ವಸ್ತುಗಳನ್ನು ಸಂಗ್ರಹಿಸಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ಅಂದಾಜು ಎರಡರಿಂದ ಮೂರು ಟನ್ ಕಸವನ್ನು ಸಂಗ್ರಹಿಸಿ ವಾಹನದಲ್ಲಿ ತುಂಬಿ ಸ್ವಂತ ವಾಹನದಲ್ಲಿ ಗೋಕರ್ಣ ಪಂಚಾಯಿತಿಯ ಕಸ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಗೋವಿಂದ ಗೌಡರು ಗೋಕರ್ಣಕ್ಕೆ ಬರುವ ಪ್ರವಾಸಿಗರು ಪ್ರವಾಸಿ ತಾಣವನ್ನು ವೀಕ್ಷಿಸಿ ಆನಂದಿಸಬೇಕು. ತಮ್ಮೊಟ್ಟಿಗೆ ತರುವ ನೀರಿನ ಬಾಟಲ್, ಆಹಾರದ ಪೊಟ್ಟಣಗಳನ್ನು ಉಪಯೋಗಿಸಿದ ನಂತರ ಕಸದ ತೊಟ್ಟಿಯಲ್ಲಿ ಹಾಕುವ ಪರಿಪಾಠ ಬೆಳೆಸಿ ಕೊಳ್ಳಬೇಕು. ಇದರಿಂದ ಸುತ್ತಮುತ್ತಲಿನ ಪರಿಸರವೂ ಚೆನ್ನಾಗಿರುತ್ತದೆ ಇವರಿಂದ ನಮ್ಮ ಆರೋಗ್ಯ ಕೂಡ ಉತ್ತಮವಾಗಿರಲು ಸಾಧ್ಯವಾಗುತ್ತದೆ. ಓಂ ಕಡಲ ತೀರಕ್ಕೆ ಕೇವಲ ನಮ್ಮ ರಾಜ್ಯದವರಲ್ಲ, ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ರಾಷ್ಟ್ರದ ಮೂಲೆ ಮೂಲೆಗಳಿಂದಲೂ ಹಾಗೂ ರಷ್ಯಾ, ಇಟಲಿ, ಜರ್ಮನ್ ಸೇರಿದಂತೆ ಜಗತ್ತಿನ ನಾನಾ ರಾಷ್ಟ್ರಗಳಿಂದ ಪ್ರವಾಸಿಗರು ಬರುತ್ತಾರೆ. ಇಲ್ಲಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ನಿಸರ್ಗದ ಸೌಂದರ್ಯವನ್ನು ಎಲ್ಲರೂ ಖುಷಿಯಿಂದ ಆನಂದಿಸುವಂತೆ ಮಾಡಬೇಕು. ಸ್ವಚ್ಛತೆ ಕುರಿತಂತೆ ನಮ್ಮ ಸಂಘವು ಈ ಪರಿಸರದಲ್ಲಿ ಆಗಾಗ ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದರೂ ಈ ಬಾರಿ ಇವತ್ತು ಹಮ್ಮಿಕೊಂಡಿದ್ದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ನಿಮಿತ್ತ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಆಗಿರುವುದು ಅತ್ಯಂತ ಖುಷಿಯ ಸಂಗತಿ. ಈ ಸೇವಾಕಾರ್ಯಕ್ರಮದಲ್ಲಿ ನಮ್ಮ ಸಂಘದ ಎಲ್ಲಾ ಸದಸ್ಯರುಗಳು ಪಾಲ್ಗೊಳ್ಳುವುದರ ಮೂಲಕ ತಮ್ಮ ಕರ್ತವ್ಯ ಬದ್ದತೆಯನ್ನು ಯಶಸ್ವಿಗೊಳಿಸಿದ್ದಾರೆ ಎಂಬುದಕ್ಕೆ ಸಂತೋಷವಾಗುತ್ತದೆ ಎಂದರು. ಈ ಅಭಿಯಾನದಲ್ಲಿ ಸುಬೋಧ್ ಶೆಟ್ಟಿ, ಸ್ವ ಸ್ವರ ಸಿಬ್ಬಂದಿಗಳು, ನಮಸ್ತೆ ಕೆಫೆ ಸಿಬ್ಬಂದಿಗಳು, ಸುರೇಶ್ ಗೌಡ, ಸುಕ್ರು ಗೌಡ, ಕೃಷ್ಣ ಗೌಡ, ಶೇಖರ್ ಗೌಡ, ಪ್ರಶಾಂತ್ ಮಾಂಜ್ರೇಕರ್ ಸೇರಿದಂತೆ 30ಕ್ಕೂ ಹೆಚ್ಚು ಸದಸ್ಯರುಗಳು ಹಾಜರಿದ್ದರು. ಕೊನೆಯಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಚಹಾ ಮತ್ತು ಉಪಹಾರದ ವ್ಯವಸ್ಥೆಯನ್ನು ನಮಸ್ತೆ ಮಾಲೀಕರು ಮಾಡಿದ್ದರು.
Leave feedback about this