ಕುಮಟಾ : ಕಳೆದ ಮೂರು ತಿಂಗಳಿನಿಂದ ಸುರಿದ ಮಳೆಯಿಂದ ಮರೆಯಾಗಿದ್ದ ಸಂಭ್ರಮ ಗಣೇಶ ಚತುರ್ಥಿಯಿಂದ ಮತ್ತೆ ಮರಳಿದೆ. ಮಳೆಗಾಲದ ಪ್ರಾರಂಭದಿಂದ ಎಡೆಬಿಡದೆ ಸುರಿದ ಮಳೆ, ಶಿರೂರು ಗುಡ್ಡ ಕುಸಿತ, ಉಳುವರೆ ಗ್ರಾಮ ಕೊಚ್ಚಿಹೋಗಿದ್ದು ಕರಾವಳಿಯನ್ನು ಅಕ್ಷರಶಃ ಜರ್ಜರಿತರನ್ನಾಗಿಸಿತು.
ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನ ಮನೆ ಮನೆ ಬಂದ ಗಣೇಶ ಎಲ್ಲರ ಮನದಲ್ಲೂ ಸಂಭ್ರಮ ತಂದಿರುವುದಂತೂ ಸತ್ಯ. ಇದಕ್ಕೆ ವರುಣ ಕೂಡ ಆಶೀರ್ವದಿಸಿದ್ದು ಭಕ್ತರ ಖುಷಿ ಮತ್ತಷ್ಟು ಹೆಚ್ಚುವಂತೆ ಮಾಡಿದೆ.