ಕುಮಟಾ : ವೃಕ್ಷದೇವತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡರಿಗೆ ಶೃದ್ದಾಂಜಲಿ ಕಾರ್ಯಕ್ರಮ ನಾಳೆ ದಿನಾಂಕ 29-12-2024 ರವಿವಾರ ಮುಂಜಾನೆ 10 ಗಂಟೆಗೆ ಹಾಲಕ್ಕಿ ಒಕ್ಕಲಿಗರ ಸಂಘದ ಕಟ್ಟಡ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಿರ್ಜಾನ ಶಾಖಾಮಠದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ದಿವ್ಯುಉಪಸ್ಥಿತಿ ಯಲ್ಲಿ
ಜರುಗಲಿರುವ ಭಾವಪೂರ್ಣ ಶೃದ್ದಾಂಜಲಿ ಕಾರ್ಯಕ್ರಮಕ್ಕೆ ಸಮಾಜ ಬಂಧುಗಳು, ತುಳಸಿ ಗೌಡರ ಅಭಿಮಾನಿಗಳು, ಅವರ ಒಡನಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತುಳಸಿ ಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶೃದ್ದಾಂಜಲಿ ಸಲ್ಲಿಸ ಬೇಕೆಂದು ಕುಮಟಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಗೋವಿಂದ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.