ಕುಮಟಾ: 2023-24 ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಕುಮಟಾ ಮತ್ತು ಹೊನ್ನಾವರ ತಾಲೂಕಿನ ಹಾಲಕ್ಕಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲು ಹಾಲಕ್ಕಿ ಒಕ್ಕಲಿಗರ ಸಂಘ ಕುಮಟಾದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಗೋವಿಂದ ಗೌಡರವರು ತಿಳಿಸಿದರು.
ಇತ್ತೀಚಿಗೆ ನಡೆದ ಸಂಘದ ಕಾರ್ಯಕಾರಿಣಿ ಸಮಿತಿಯ ಸಭೆಯಲ್ಲಿ ಪ್ರತಿಭಾ ಪುರಸ್ಕಾರದ ಕುರಿತು ಚರ್ಚಿಸಿ ನಿರ್ಣಯ ಕೈಗೊಂಡ ಬಳಿಕ 2023-24 ರ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಎಸ್.ಎಸ್.ಎಲ್.ಸಿ. , ಪಿ.ಯು.ಸಿಯಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಹಾಗೂ ಪದವಿಯಲ್ಲಿ ಶೇಕಡಾ 75 ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಹಾಗೂ ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದಲ್ಲಿ ಗೌರವಿಸಲು ತೀರ್ಮಾನಿಸಲಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ರಂಗದಲ್ಲಿ ಸಾಧನೆ ತೋರಿದ ಸಮುದಾಯದ ಸಾಧಕರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದ್ದು ಅಂತಹ ಸಾಧಕರಿದ್ದಲ್ಲಿ ಸಂಘದ ಗಮನಕ್ಕೆ ತರಲು ಸಮಾಜ ಬಾಂಧವರಲ್ಲಿ ವಿನಂತಿಸಲಾಗಿದೆ.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕುಮಟಾ ಮತ್ತು ಹೊನ್ನಾವರ ತಾಲೂಕಿನವರಾಗಿದ್ದು ದೃಢೀಕರಿಸಿದ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಹಾಗೂ ಆಧಾರ ಕಾರ್ಡ್ ನಕಲು ಪ್ರತಿಯೊಂದಿಗೆ ದಿನಾಂಕ 15-12-2024 ರೊಳಗೆ ಅರ್ಜಿ ಸಲ್ಲಿಸಬೇಕು. ಕ್ರೀಡಾ ಸಾಧಕರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಅರ್ಜಿಯನ್ನು ಅಧ್ಯಕ್ಷರು. ಹಾಲಕ್ಕಿ ಒಕ್ಕಲಿಗರ ಸಂಘ (ರಿ) ಕುಮಟಾ. ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನ ದೀವಗಿ. ಅಂಚೆ : ದೀವಗಿ. ತಾ. ಕುಮಟಾ (ಉ.ಕ) ಇಲ್ಲಿಗೆ ಅಂಚೆ ಮೂಲಕ ಇಲ್ಲವೇ ಖುದ್ದಾಗಿ ಬಂದು ಸಲ್ಲಿಸಬಹುದು. ಯಾವುದೇ ಕಾರಣಕ್ಕೂ ವಾಟ್ಸಪ್, ಇಮೇಲ್ ನಲ್ಲಿ ಕಳುಹಿಸಿದ ಅರ್ಜಿಯನ್ನು ಸ್ವೀಕರಿಸುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಶ್ರೀಧರ ಗೌಡ. ಕಾರ್ಯದರ್ಶಿ ಮೊಬೈಲ್ ಸಂಖ್ಯೆ; 8310764316/ ಶಂಕರ ಗೌಡ. ವ್ಯವಸ್ಥಾಪಕರು , ಮೊಬೈಲ್ ಸಂಖ್ಯೆ : 9964487486 ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾದ ನೀಲಪ್ಪ ಗೌಡ, ಪದಾಧಿಕಾರಿಗಳಾದ ಕೃಷ್ಣ ಗೌಡ ದೀವಗಿ, ಜಂಗಾ ಗೌಡ, ಶಂಕರ್ ಗೌಡ ಮಣಕೋಣ, ಕುಪ್ಪು ಗೌಡ, ಕೃಷ್ಣ ಗೌಡ ಹರಕಡೆ, ಶಂಕರ್ ಗೌಡ ಕಾಗಾಲ, ಬಾಲಚಂದ್ರ ಗೌಡ, ಅರುಣ್ ಗೌಡ, ಈಶ್ವರ ಗೌಡ, ಮಾದೇವ ಗೌಡ, ಈರು ಗೌಡ, ಗಣೇಶ ಗೌಡ, ಗಣಪತಿ ಗೌಡ, ರಾಧಾಕೃಷ್ಣ ಗೌಡ, ರಮೇಶ್ ಗೌಡ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.