ಕಾರವಾರ : ಕೆ.ಎಸ್.ಆರ್.ಟಿ.ಸಿ. ಬಸ್‌ನ ಹಿಂಬದಿಯ ಎಕ್ಸೆಲ್ ತುಂಡಾಗಿ ಬಿದ್ದ ಪರಿಣಾಮ ಕೆಲ ಹೊತ್ತು ಒಳಗಿದ್ದ ಪ್ರಯಾಣಿಕರಿಗೆ ಏನು ನಡೆಯುತ್ತಿದೆ ಎಂದು ಅರ್ಥವಾಗದೇ ಕಂಗಾಲಾದ ವಾತಾವರಣ ಸೃಷ್ಟಿಯಾಯಿತು.

ಕಾರವಾರದಿಂದ ಹಬ್ಬುವಾಡ ಮಾರ್ಗವಾಗಿ ಕೆರವಡಿ ಗ್ರಾಮಕ್ಕೆ ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಬಸ್‌ನ ಹಿಂಬದಿಯ ಆಕ್ಸಲ್ ಏಕಾಏಕಿ ತುಂಡಾಗಿ, ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಗಟಾರಗೆ ಸಾಗುತ್ತಿದ್ದ ಬಸ್‌ನ್ನು ಸಾರ್ವಜನಿಕರು ಹಿಡಿದು ನಿಲ್ಲಿಸಲು ಹರಸಾಹಸ ಪಟ್ಟಿದ್ದಾರೆ. ಬಸ್ ಕುಳುಕುವ ವೇಗಕ್ಕೆ ಒಳಗಿದ್ದ ಪ್ರಯಾಣಿಕರು ಸೀಟಿಗೆ, ಕಂಬಿಗೆ ಬಡಿದುಕೊಂಡಿದ್ದರಿಂದ ಹಲವರಿಗೆ ಸಣ್ಗಾಣಪುಟ್ಯಟ ಗಾಯಗಳಾಗಿದ್ದು, ಸುದೈವದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದಲ್ಲದೆ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಸವಾರರು ಕಂಗಾಲಾಗಿ ಜೀವ ಭಯಯಿಂದ ತಮ್ಮ ವಾಹನ ನಿಲ್ಲಿಸಿ ತಮಗಾಗುವ ಅನಾಹುತದಿಂದ ಪಾರಾದರು. ಸುಸ್ಥಿತಿಯಲ್ಲಿರದ ಬಸ್‌ನ್ನು ಬಿಟ್ಟ ಅಧಿಕಾರಿಗಳ ವಿರುದ್ದ ಪ್ರಯಾಣಿಕರು ಮತ್ತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು. ನಂತರ ಕ್ರೇನ್ ತಂದು ಬಸ್ ನ್ನು ಎತ್ತಿ ಸಾಗಿಸಲಾಯಿತು.