ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ವೃದ್ಧಿಸುತ್ತದೆ – ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ
Uncategorized

ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ವೃದ್ಧಿಸುತ್ತದೆ – ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ

ಕುಮಟಾ : ಕ್ರೀಡೆಗಳು ಬದುಕಿನ ಅವಿಭಾಜ್ಯ ಅಂಗವಾದಾಗ ಎಲ್ಲ ರೋಗಗಳೂ ದೂರ ಓಡಿಹೋಗುತ್ತವೆ. ಆಟ ಆಡುವಾಗ ತೋರುವ ಆಂಗಿಕ ಕಸರತ್ತುಗಳು ನಮ್ಮನ್ನು ಕ್ರೀಯಾಶೀಲವಾಗಿರಿಸುವಲ್ಲಿ ಸಹಕಾರಿಯಾಗಿವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬ್ರಹ್ಮಚಾರಿ ಶ್ರೀ ಗಳಾದ ನಿಶ್ಚಲಾನಂದನಾಥ ಸ್ವಾಮೀಜಿಯವರು ಅಭಿಪ್ರಾಯ ಪಟ್ಟರು.

ಅವರು ಕುಮಟಾ ತಾಲೂಕಿನ ಕಬ್ಬರ್ಗಿಯಲ್ಲಿ ಶ್ರೀ ಜಟಗೇಶ್ವರ ಯುವಕ ಸಂಘದವರು ಆಯೋಜಿಸಿದ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾವಳಿಯ ದಿವ್ಯ ಉಪಸ್ಥಿತಿಯಲ್ಲಿ ಯುವಕರು ಪ್ರತಿವರ್ಷ ವಾಲಿಬಾಲ್‌ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಸಂಘಟನಾತ್ಮಕವಾಗಿ ಒಗ್ಗೂಡುತ್ತಿರುವುದು ಸಮಾಜದ ದೃಷ್ಠಿಯಿಂದ ತುಂಬಾನೆ ಒಳ್ಳೆಯದು. ಕ್ರೀಡೆಯ ಜೊತೆಗೆ ಭವಿಷ್ಯದ ಪೀಳಿಗೆಯಾದ ಮಕ್ಕಳಿಗೂ ಅವಕಾಶ ನೀಡಿ ಅವರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಾಲಕ್ಕಿ ಸಮಜಾಜದ ಸಂಸ್ಕೃತಿಯ ಪ್ರತೀಕವಾದ ಸುಗ್ಗಿಕುಣಿತ ಹಾಗೂ ಕೋಲಾಟದಂತಹ ಜನಪದ ಕಲೆಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ಸಂಘವು ಸಮಾಜದ ಬಗ್ಗೆ ಹೊಂದಿರುವ ಕಾಳಜಿಯನ್ನು ಹೊರಹಾಕುತ್ತವೆ. ಕ್ರೀಡಾಳುಗಳು ಕೇವಲ ಈ ಪಂದ್ಯಾವಳಿಗೆ ಸೀಮಿತ ಗೊಳ್ಳದೇ ಭವಿಷ್ಯದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲೂ ಭಾಗವಹಿಸಿ ಸಮಾಜದ ಹಾಗೂ ಜಿಲ್ಲೆಯ ಕೀರ್ತಿಯನ್ನು ಬೆಳಗಲಿ ಎಂದು ಹಾರೈಸಿದರು.

ಉದ್ಘಾಟಕರಾಗಿ ಆಗಮಿಸಿದ ಶಾಸಕ ದಿನಕರ ಶೆಟ್ಟಿ ಜಟಗೇಶ್ವರ ಯುವಕರ ಸಂಘಟನೆ ನಿರಂತರವಾಗಿ ಮುಂದುವರೆಯಲಿ. ಗ್ರಾಮೀಣ ಪ್ರದೇಶವಾದ ಈ ಕಬ್ಬರಗಿ ಯಂತಹ ಹಳ್ಳಿಯಲ್ಲಿ ಜಗಮಗಿಸುವ ಲೈಟ್‌ ಅಳವಡಿಸಿ ಪಂದ್ಯಾವಳಿ ಆಯೋಜಿಸುತ್ತಿರುವುದು ನಿಮ್ಮ ಇಚ್ಚಾಸಕ್ತಿಯನ್ನು ತೋರಿಸುತ್ತದೆ ಎಂದರು. ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಗೋವಿಂದ ಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜೀವ ಗೌಡ, ದೀವಗಿ ಗ್ರಾಮ ಪಮಚಾಯತ ಮಾಜಿ ಅಧ್ಯಕ್ಷ  ಕೃಷ್ಣ ಗೌಡ, ತಾಲೂಕು ಪಂಚಾಯತ ಮಾಜಿ ಅಧ್ಯಕ್ಷ ಫ್ರಾನ್ಸಿಸ್‌ ಫರ್ನಾಂಡಿಸ್‌, ಸಂಘದ ಅಧ್ಯಕ್ಷ ಮಂಜುನಾಥ ಗೌಡ ಸೇರಿದಂತೆ ಹಲವು ಮುಖಂಡರು ಉಪ್ಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಾಲಿಬಾಲ್‌ ನಲ್ಲಿ ವಿಶ್ವವಿದ್ಯಾಲಯದ ಬ್ಲೂ ಆಗಿರುವ ನಿಖಿತಾ ಗೌಡರನ್ನು ಸನ್ಮಾನಿಸಲಾಯಿತು.