ಗೋಕರ್ಣದಲ್ಲಿ ಸ್ವಯಂಪ್ರೇರಿತ ಸ್ವಚ್ಛತಾ ಕಾರ್ಯಕ್ರಮ
Art & Culture General News Health & Medicine Karnataka Uttara Kannada

ಗೋಕರ್ಣದಲ್ಲಿ ಸ್ವಯಂಪ್ರೇರಿತ ಸ್ವಚ್ಛತಾ ಕಾರ್ಯಕ್ರಮ

ಗೋಕರ್ಣ; ಪುರಾಣ ಪ್ರಸಿದ್ಧ ಗೋಕರ್ಣ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಖ್ಯಾತಿ ಪಡೆಯುತ್ತಿದೆ. ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲಿದೆ. ಇದರಿಂದ

ಬೀಚ್ ಗಳು, ಬೀಚಿಗೆ ಸಂಪರ್ಕಿಸುವ ರಸ್ತೆ ಮಾರ್ಗಗಳ ಅಕ್ಕ ಪಕ್ಕ ಬಾಟಲಿ, ಪ್ಲಾಸ್ಟಿಕ್ ಈ ಮುಂತಾದ ಕಸ ಕಡ್ಡಿಗಳ ರಾಶಿ ಗೋಕರ್ಣದ ಪಾವಿತ್ರ್ಯತೆಗೆ ದಕ್ಕೆ ತರುತ್ತಿದೆ. ಪರಿಸರಕ್ಕೆ ಮಾರಕವಾಗುತ್ತಿರುವ ತ್ಯಾಜ್ಯಗಳನ್ನು
ಸ್ವಚ್ಛಗೊಳಿಸಲು ಸ್ವಯಂ ಪ್ರೇರಣೆಯಿಂದ
ಪರಿವರ್ತನ ಚಾರಿಟೇಬಲ್ ಟ್ರಸ್ಟ್ (ರಿ) ಗೋಕರ್ಣ ಮತ್ತು ಗೋಗರ್ಭ ಕ್ರೀಕೆಟರ್ಸ ರವರ ಸಂಯುಕ್ತ ಆಶ್ರಯದಲ್ಲಿ ಹಿಲ್ ಟಾಪ್ ನಿಂದ ಗೋಕರ್ಣ ಗಣಪತಿ ದೇವಸ್ಥಾನದ ಹತ್ತಿರ ದ ಗಾಯತ್ರಿ ಕೆರೆ ವರೆಗೆ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಮುಂಜಾನೆ 7 ಗಂಟೆಯಿಂದ 9 ಗಂಟೆ ವರೆಗೆ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್, ಬಾಟಲಿ ಸೇರಿದಂತೆ ಸುಮಾರು 9 ರಿಂದ 10 ಕ್ವಿಂಟಾಲ್ ಕಸಕಡ್ಡಿ ಗಳನ್ನು

ಸಂಗ್ರಹಿಸಿ ವಾಹನದ ಮೂಲಕ ಗ್ರಾಮ ಪಂಚಾಯತ್ ನ ಕಸವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟನ ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದ ಗೌಡ, ಗೋಗರ್ಭ ಕ್ರಿಕೆಟರ್ಸ್ ನ ಗಣೇಶ ಅಡಿಮೂಳೆ, ಸಂದೀಪ್ ಹೆರವಟ್ಟಾ ಸೇರಿದಂತೆ ಟ್ರಸ್ಟ್ ಹಾಗೂ ಕ್ರಿಕೆಟರ್ಸ್ ನ ಸುಮಾರು 60 ಸದಸ್ಯರು ಪಾಲ್ಗೊಂಡಿದ್ದರು.