ಗೋಕರ್ಣ ಪ್ರೀಮಿಯರ್‌ ಲೀಗ್‌ (GPL), MCC ವಾರಿಯರ್‌ ತಂಡ ಚಾಂಪಿಯನ್‌ :
Karnataka Sport Uttara Kannada

ಗೋಕರ್ಣ ಪ್ರೀಮಿಯರ್‌ ಲೀಗ್‌ (GPL), MCC ವಾರಿಯರ್‌ ತಂಡ ಚಾಂಪಿಯನ್‌ :

ಗೋಕರ್ಣ : ಗೋಗರ್ಭ ಕ್ರಿಕೆಟ್ ಕ್ಲಬ್’ ಇವರ ಆಶ್ರಯದಲ್ಲಿ ಕಳೆದ 7 ದಿನಗಳಿಂದ ಗೋಕರ್ಣದ ಗೋಗರ್ಭ ಮೈದಾನದಲ್ಲಿ ನಡೆಯುತ್ತಿದ್ದ ”ಗೋಕರ್ಣ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾವಳಿಯಲ್ಲಿ MCC ವಾರಿಯರ್‌ ತಂಡ ಚಾಂಪಿಯನ್‌ ಪಟ್ಟ ಧರಿಸಿತು.  MCC ವಾರಿಯರ್ಸ್ ಹಾಗೂ ಅಶ್ವಥ್ ಗಣಪತಿ ಹಂಟರ್ಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ MCC ವಾರಿಯರ್ಸ್ ತಂಡ 54 ರನ್ ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಫಯನಲ್‌ ಕಪ್‌ ತನ್ನದಾಗಿಸಿಕೊಂಡಿತು.

ತೀವ್ರ ಕುತೂಹಲ ಮೂಡಿಸಿದ ಫೈನಲ್‌ ಪಂದ್ಯ ಸಾವಿರಾರು ಕ್ರಿಕೆಟ್‌ ಪ್ರೇಮಿಗಳನ್ನು ಮೈದಾನಕ್ಕೆ ಕರೆತಂದಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ MCC ವಾರಿಯರ್‌ ತಂಡ ರನ್‌ ಹೊಳೆ ಹರಿಸಿ ಭರ್ಜರಿ ರನ್‌ ಮೊತ್ತ ಸಂಗ್ರಹಿಸಿತ್ತು. ಇದರಿಂದ ಸಹಜವಾಗಿ ತೀವ್ರ ಪೈಪೋಟಿ ಫೈನಲ್‌ ನಲ್ಲಿ ನಡೆಯಬಹುದು ಎಂದು ಸುಡು ಬಿಸಿಲನ್ನು ಲೆಕ್ಕಿಸದೇ ಮೈದಾನ ಸುತ್ತ ನೆರೆದಿದ್ದ ಪ್ರೇಕ್ಷಕರಿಗೆ ಅಶ್ವಥ್ ಗಣಪತಿ ಹಂಟರ್ಸ್ ತಂಡದ ನೀರಸ ಪ್ರದರ್ಶನ ಬೇಸರ ಮೂಡಿಸಿತು. ಸುಲಭವಾಗಿ MCC ವಾರಿಯರ್‌ ತಂಡ ಜಯಗಳಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉದ್ಯಮಿ ಗೋವಿಂದ್ ಗೌಡ, ರಾಜಗೋಪಾಲ್ ಅಡಿ ಗುರೂಜಿ , ವೇದ ಪಾಠಶಾಲೆಯ ಗುರುಗಳಾದ ಉದಯ್ ಮಯ್ಯರ್ ಹಾಗೂ ಪ್ರದೀಪ್ ನಾಯಕ ಉಪಸ್ಥಿತರಿದ್ದು ಚಾಂಪಿಯನ್‌ ಹಾಗೂ ರನ್ನರ್‌ ಅಪ್‌ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಂಘಟಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.  ಗಣೇಶ ಅಡಿಮೂಳೆ ಗಣ್ಯರನ್ನು ಸ್ವಾಗತಿಸಿದರೆ,  ಆನಂದ್ ಹೊಸಮನೆ ನಿರೂಪಿಸಿದರು.