ಗೋಕರ್ಣ ಮಹಾಬಲೇಶ್ವರ ದೇಗುಲದಲ್ಲಿ ಕಾರ್ತಿಕ  ದೀಪೋತ್ಸವ :
Art & Culture Karnataka Uttara Kannada

ಗೋಕರ್ಣ ಮಹಾಬಲೇಶ್ವರ ದೇಗುಲದಲ್ಲಿ ಕಾರ್ತಿಕ  ದೀಪೋತ್ಸವ :

ಕುಮಟಾ : ದಕ್ಷಿಣದ ಕಾಶಿ, ಭೂಕೈಲಾಸ  ಎಂದೇ ಪುರಾಣ ಪ್ರಸಿದ್ದಿ ಹೊಂದಿರುವ  ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ಶೃದ್ದಾ ಭಕ್ತಿಯಿಂದ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳು

ವೈದಿಕರಿಂದ ವಿಧಿವತ್ತಾಗಿ ಮುಂಜಾನೆಯಿಂದಲೇ ಪ್ರಾರಂಭಗೊಂಡು ರಾತ್ರಿ ಮಹಾಲೇಶ್ವರ ದೇವರ ಮೆರವಣಿಗೆ ರಥಬೀದಿಯಲ್ಲಿ ಸಾಗಿತು. ಅತ್ಯಂತ ಆಸ್ತಿಕ ಭಾವದಿಂದ ದೇವರ ಪಲ್ಲಕ್ಕಿಗೆ ಫಲಪುಷ್ಪ ಅರ್ಪಿಸಿದ ಭಕ್ತರು ಮೆರವಣಿಗೆಯುದ್ದಕ್ಕೂ ಸಾಗಿಬಂದರು. ಪಲ್ಲಕ್ಕಿ ಹಿಂತಿರುಗುವ ಸಮಯದಲ್ಲಿ ಮಹಾಬಲೇಶ್ವರ ದೇವಸ್ಥಾನ ಹಣತೆಯ ದೀಪಗಳಿಂದ ಕಂಗೊಳಿಸುತ್ತಿತ್ತು

ದೇವಸ್ಥಾದ ಗೋಪುರದ ಸುತ್ತೆಲ್ಲಾ ಹಣತೆಯ ದೀಪಾಲಂಕಾರ ಝಗಮಗಿಸುತ್ತಿತ್ತು. ವಿಶೇಷವೆಂದರೆ ಕಾರ್ತಿಕ ದೀಪೋತ್ಸವದಂದು ದೇವಸ್ಥಾನ ಗೋಪುರದ ಮೇಲೆಲ್ಲಾ ಹಣತೆ ಬೆಳಗಿಸುವವರು ಇಲ್ಲಿನ ಬುಡಕಟ್ಟು ಸಂಸ್ಕೃತಿ ಹೊಂದಿರುವ ಹಾಲಕ್ಕಿ ಒಕ್ಕಲು ಸಮುದಾಯ. 

ಮುಂಜಾನೆಯಿಂದಲೇ ಗುಡಿಯ ಸುತ್ತ ಗೋಪುರದ ಮೇಲೆಲ್ಲಾ ಸ್ವಚ್ಚಗೊಳಿಸಿ ಹಣತೆಯಲ್ಲಿ ಎಣ್ಣೆ ಹಾಕಿ ಸಿದ್ಪಡಿಸಿಟ್ಟುಕೊಂಡಿರುತ್ತಾರೆ.. ದೇವರು ಸವಾರಿಯಿಂದ ಹಿಂತಿರುಗುತ್ತಿದ್ದಂತೆ ದೀಪಬೆಳಗಿಸಿ ಬರಮಾಡಿಕೊಳ್ಳುತ್ತಾರೆ. ಇಡೀ ವರ್ಷದಲ್ಲಿ ಈ ದಿನ ಮಾತ್ರ ಗೋಪುರದ ಮೇಲೆ ಹತ್ತಿ ದೀಪಬೆಳಗಿಸಲು ಅವಕಾಶವಿದ್ದು ಇಲ್ಲಿ ದೀಪಹಚ್ಚುವುದರಿಂದ ತಮ್ಮ ಮನಸ್ಸಿನ ಕೋರಿಕೆ ಇಲ್ಲವೇ ತಾವಂದುಕೊಂಡಿದ್ದು ಶಿವ ಪರಮಾತ್ಮ ನೆರವೇರಿಸುತ್ತಾನೆ ಎಂಬ ನಂಬುಗೆ ಗಟ್ಟಿಯಾಗಿ ಬೇರೂರಿದೆ. ಈ ಕಾರಣಕ್ಕಾಗಿ ದೇವಸ್ಥಾನದ ಗೋಪುರದ ಮೇಲೆ ಹಣತೆಯ ದೀಪ ಹಚ್ಚಲು ವರ್ಷದಿಂದ ಕಾಯುತ್ತಾರೆ ಎಂದು ನಾಗಪ್ಪ ಗೌಡ  ಅಭಿಪ್ರಾಯಪಟ್ಟರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video

This site uses Akismet to reduce spam. Learn how your comment data is processed.