ಗೋಕರ್ಣ ಸಿಡಿಲು ಬಡಿದು ನಾಲ್ವರಿಗೆ ಗಾಯ :
Karnataka Lifestyle Uncategorized Uttara Kannada

ಗೋಕರ್ಣ ಸಿಡಿಲು ಬಡಿದು ನಾಲ್ವರಿಗೆ ಗಾಯ :

 ಕುಮಟಾ : ತರಕಾರಿ ಖರೀದಿಸಲು ವಾರದ ಸಂತೆಗೆ ತೆರಳಿದವರಿಗೆ  ಏಕಾಏಕಿ ಅಬ್ಬರಿಸಿದ ಸಿಡಿಲು ಬಡಿದು  ನಾಲ್ವರು ಗಾಯಗೊಂಡ ಘಟನೆ ಗುರುವಾರ ಸಂಜೆ ತಾಲ್ಲೂಕಿನ ಗೋಕರ್ಣದಲ್ಲಿ ನಡೆದಿದೆ. ನಾಲ್ಕು ಗಂಟೆ ಸುಮಾರಿಗೆ  ಭಾರಿ ಗುಡುಗು ಮಿಂಚಿನೊಂದಿಗೆ  ಮಳೆ ಅಬ್ಬರಿಸುತ್ತಿದ್ದ ವೇಳೆ ತರಕಾರಿ ಖರೀದಿಗೆ ತೆರಳಿದ್ದವರು ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದು ಆ ವೇಳೆ ಸಿಡಿಲು

ಅಪ್ಪಳಿಸಿ  ಗಾಯಗೊಂಡಿದ್ದರು. ತಕ್ಷಣ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದು, ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಹಾಗೂ ಡಾ. ದಿವ್ಯಾ , ಸಿಬ್ಬಂದಿಗಳು ಚಿಕಿತ್ಸೆ ನೀಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿದ್ರಗೇರಿಯ ಪರಮೇಶ್ವರ ಗೌಡ(56),  ಬಿಹಾರ ರಾಜ್ಯದ  ಕಾರ್ಮಿಕರಾದ   ನೂರ ಅಲಮಾ(40), ಮಹ್ಮದ್ ಆಜಾದ್ (30), ಆಯುಷ್‌ಕುಮಾರ (30) ಗಾಯಗೊಂಡವರಾಗಿದ್ದಾರೆ.ಸಂಜೆ 5 ಗಂಟೆಯಿಂದ 6.30 ರವರೆಗೂ ಗಾಯಗೊಂಡು ನಿಸ್ತೇಜ ವಾದವರ  ಅಂಗಗಳಿಗೆ ವ್ಯಾಯಾಮ  ಮತ್ತಿರ ಚಿಕಿತ್ಸೆ ನೀಡಿದ್ದಾರೆ. ಗಾಯಗೊಂಡವರು ಚೇತರಿಸಿಕೊಳ್ಳುತ್ತಿದ್ದಾರೆ