ಚಿಕಿತ್ಸೆಗೆ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ನಿಂದ 50 ಸಾವಿರ ರೂಪಾಯಿ ಆರ್ಥಿಕ ನೆರವು;
Uncategorized

ಚಿಕಿತ್ಸೆಗೆ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ನಿಂದ 50 ಸಾವಿರ ರೂಪಾಯಿ ಆರ್ಥಿಕ ನೆರವು;

ಕುಮಟಾ: ಗೋಕರ್ಣದ ಹಾರುಮಾಸ್ಕೇರಿ ಗ್ರಾಮದ 21 ವರ್ಷದ ಸಂತೋಷ ಚಂದ್ರಕಾಂತ ಗೌಡ ಎಂಬ ಯುವಕನಿಗೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಇದರಿಂದ ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿರುವ

ಸಂತೋಷನ ಕುಟುಂಬದಲ್ಲಿ ಸಂತೋಷವೇ ಇಲ್ಲದಂತಾಗಿದೆ. ವಯಸ್ಸಾದ ತಾಯಿಯ ಜೊತೆಗೆ ಇಬ್ಬರು ಕುಬ್ಜ ಸಹೋದರಿಯನ್ನು ಹೊಂದಿರುವ ಈತನೇ ಮನೆಗೆ ಆಧಾರ ಸ್ಥಂಭನಾಗಿದ್ದ. ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದ ಕುಟುಂಬಕ್ಕೆ ಮಾರಕ ಕಾಯಿಲೆ ಬಂದಿದ್ದು ಆಕಾಶವೇ ಕಳಚಿ ಬಿದ್ದಂತಾಗಿದೆ.
ತೀರಾ ಸಂಕಷ್ಟದಲ್ಲಿರುವ ಸಂತೋಷನ ಕುಟುಂಬದ ಪರಿಸ್ಥಿತಿಯನ್ನು ತಿಳಿದ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ನ ಮೆನೇಜಿಂಗ್ ಟ್ರಸ್ಟಿ , ಉದ್ಯಮಿ ಗೋವಿಂದ ಗೌಡರವರು ಹಾರುಮಾಸ್ಕೇರಿಯಲ್ಲಿರುವ ಯುವಕನ ಮನೆಗೆ ಭೇಟಿ ನೀಡಿ

ಪರಿಸ್ಥಿತಿಯನ್ನು ಅವಲೋಕಿಸಿ ತಮ್ಮ ಟ್ರಸ್ಟ್ ನ ಮೂಲಕ ಐವತ್ತು ಸಾವಿರ ರೂಪಾಯಿ ನೆರವು ನೀಡಿ ಯುವಕನ ತಾಯಿ ಜಾನಕಿ ಗೌಡ ಮತ್ತು ಅವರ ಕುಬ್ಜ ಮಕ್ಕಳಾದ ಮಾಲಿನಿ ಹಾಗೂ ಸುಮತಿ ಯವರಿಗೆ ಸಾಂತ್ವನ ಹೇಳಿದರು. ಆದಷ್ಟು ಬೇಗ ಸಂತೋಷನು ಚಿಕಿತ್ಸೆ ಯಿಂದ ಗುಣಮುಖರಾಗಿ ಮನೆಗೆ ಹಿಂತಿರುಗುವಂತಾಗಲಿ ಎಂದು ಪ್ರಾರ್ಥಿಸಿದರು. ಮುಂದಿನ ದಿನಗಳಲ್ಲಿ ಚಿಕಿತ್ಸೆಗೆ ಹೋಗಿ ಬರಲು ವಾಹನದ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಯುವಕರಿಗೆ ದುಡಿಮೆ ಮಾಡುವಾಗ ಒಂದಿಷ್ಟು ಉಳಿತಾಯ ಮಾಡುವ ಯೋಜನೆ ಮಾಡಬೇಕು. ಅದು ನಮ್ಮ ಅಥವಾ ನಮ್ಮ ಕುಟುಂಬದ ಸಂಕಷ್ಟ ಕಾಲದಲ್ಲಿ ನೆರವು ನೀಡುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಟ್ರಸ್ಟಿ ಗಳಾದ ಜಯಾ ಗೋವಿಂದ ಗೌಡ, ಶ್ರೀಧರ ಗೌಡ ಹಾಗೂ ಗೋಕರ್ಣದ ಗಣಪತಿ ಗೌಡ, ಗಣೇಶ ಗೌಡ ಮತ್ತು ಸ್ಥಳೀಯರಾದ ಮಂಜುನಾಥ ಗೌಡ, ಗಣಪತಿ, ನಾಗರಾಜ, ಗೋಪಾಲ, ನೀಲಾಧರ, ಗೋವಿಂದ, ಮಹೇಶ್, ವಿನಾಯಕ, ಸಂತೋಷ ಮೊದಲಾದರು ಹಾಜರಿದ್ದು ಟ್ರಸ್ಟ್ ನ ಸಹಾಯಕ್ಕೆ ಕುಟುಂಬದ ಪರವಾಗಿ ಧನ್ಯವಾದ ಹೇಳಿದರು.