ಕುಮಟಾ; ಹಾಲಕ್ಕಿ ಒಕ್ಕಲಿಗರ ಸಂಘ ಕುಮಟಾದ ಮಹಾಸಭೆಯನ್ನು ಇದೇ ದಿನಾಂಕ 07 ಜನವರಿ 2024 ರವಿವಾರ ದಂದು ಮುಂಜಾನೆ 10 ಗಂಟೆಯಿಂದ ಸಂಘದ ಕಟ್ಟಡ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಆಯವ್ಯಯ ಪತ್ರಿಕೆ ಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಿರ್ಜಾನ ಶಾಖಾಮಠದ ಬ್ರಹ್ಮಚಾರಿ ಶ್ರೀಗಳಾದ ನಿಶ್ಚಲಾನಂದನಾಥ ಸ್ವಾಮೀಜಿ ಯವರು ಬಿಡುಗಡೆ ಮಾಡುವರು. ನಂತರದಲ್ಲಿ ಸಂಘದ ಅಧ್ಯಕ್ಷರಿಂದ ಆಯವ್ಯಯ ಮಂಡನೆ , ಚರ್ಚೆ ನಡೆಯಲಿದೆ. ಈ ಪ್ರಕ್ರಿಯೆ ನಂತರದಲ್ಲಿ ಚಾಲ್ತಿಯಲ್ಲಿರುವ ಸಂಘದ ಕಾರ್ಯಕಾರಿಣಿ ಸಮಿತಿ ವಿಸರ್ಜನೆ ಮಾಡಿ ನೂತನ ಕಾರ್ಯಕಾರಿಣಿ ಸಮಿತಿ ಆಯ್ಕೆ ಮಾಡಲಾಗುತ್ತದೆ. ಸಮಿತಿಯ ಪದಾಧಿಕಾರಿಗಳಾಗಲು ಸಂಘದ ಸದಸ್ಯತ್ವ ಕಡ್ಡಾಯವಾಗಿ ಹೊಂದಿರಬೇಕು. ಸದಸ್ಯತ್ವ ಪಡೆಯಲು ಈ ತಿಂಗಳ 6 ನೇ ತಾರೀಖಿನ ವರೆಗೆ ಕಾಲಾವಕಾಶ ನೀಡಲಾಗಿದೆ.
ಕುಮಟಾ ಮತ್ತು ಹೊನ್ನಾವರ ತಾಲೂಕಿನ ಹಾಲಕ್ಕಿ ಸಮಾಜದ 18 ವರ್ಷ ಮೇಲ್ಪಟ್ಟ ಪುರುಷ/ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಪಡೆದು ಕೊಳ್ಳಬೇಕು ಹಾಗೂ ದಿನಾಂಕ 7 ರಂದು ನಡೆಯಲಿರುವ ಸಂಘದ ಮಹಾಸಭೆ ಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಲಕ್ಕಿ ಸಮಾಜದವರು ಹಾಜರಿರಬೇಕು ಎಂದು ಸಂಘದ ಅಧ್ಯಕ್ಷ ಗೋವಿಂದ ಗೌಡ ರವರು ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.