ಜಿಲ್ಲೆಯಲ್ಲಿ ಬಗೆಹರಿಯದ ಮರಳು ಸಮಸ್ಯೆ : ಕರಾವಳಿಯಲ್ಲೂ ಎಂ ಸ್ಯಾಂಡ್ ನತ್ತ ಕಟ್ಟಡ ಮಾಲಿಕರ ಚಿತ್ತ.
Articles Business Uncategorized Uttara Kannada

ಜಿಲ್ಲೆಯಲ್ಲಿ ಬಗೆಹರಿಯದ ಮರಳು ಸಮಸ್ಯೆ : ಕರಾವಳಿಯಲ್ಲೂ ಎಂ ಸ್ಯಾಂಡ್ ನತ್ತ ಕಟ್ಟಡ ಮಾಲಿಕರ ಚಿತ್ತ.

ಕುಮಟಾ; ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಾಡಿದರಂತೆ ಎನ್ನುವುದು ಮರಳಿನ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಅಕ್ಷರ ಅನ್ವಯವಾಗುವ ಗಾದೆ ಮಾತು. ಸರಕಾರದ ಇಬ್ಬಗೆಯ ನೀತಿಯಿಂದ ಹೈರಾಣ ಆಗಿದ್ದು ಕಟ್ಟಡ ಮಾಲೀಕರು.

ಮರಳು ಕಣ್ ಮುಂದೆ ಣುತ್ತಿದ್ದರೂ ಅದು ಕೈಗೆ ಸಿಗದೆ ನೂರಾರು ಕಿಲೋಮೀಟರ್ ದೂರದಿಂದ ಅರ್ಧಕ್ಕೆ ನಿಂತಿರುವ ಕಾಮಗಾರಿ ಮುಗಿಸಲು ಹಾಗೂ ತುರ್ತಾಗಿ ಮುಗಿಸಲೇ ಬೇಕಾದ ಕಾಮಗಾರಿ ನಿರ್ವಹಿಸಲು ಹೆಚ್ಚುವರಿಯಾಗಿ ಹಣ ತೆತ್ತು ಎಂ ಸ್ಯಾಂಡ್ ನತ್ತ ಗವನಹರಿಸಿರುವುದು ಜಿಲ್ಲೆಯ ಯಾವುದೇ ಸಮಸ್ಯೆಗೂ ಉತ್ತರ ಕಾಣದ ಜಿಲ್ಲೆ ಎಂಬ ಹಣೆಪಟ್ಟಿ ಎದ್ದು ತೋರುವಂತಾಗಿದೆ. 

ಈ ವರ್ಷ ಸುರಿದ ಮಳೆಗಾಲಕ್ಕೆ ಕಾಮಗಾರಿ ನಡೆಸಲು ಅಸಾಧ್ಯವಾಗಿದ್ದ ಜನತೆ ಈಗಲಾದರೂ ಕೆಲಸ ನಿರ್ವಹಿಸೋಣ ಎಂದು ಆಲೋಚನೆ ಮಾಡಿದರೆ ಮರಳಿನ ಸಮಸ್ಯೆ ಗುಮ್ಮವಾಗಿ ಕಾಡಿದೆ. ಆದಷ್ಟು ಬೇಗ ಮರಳಿನ ಸಮಸ್ಯೆಗೆ ಮುಕ್ತಿ ನೀಡಿ ಎಂಬುದು ಜಿಲ್ಲೆಯ ಜನತೆಯ  ಅಳಲು.