ಕುಮಟಾ: ಕಾರ್ತಿಕ ಮಾಸ ಶುಕ್ಲ ಪಕ್ಷದ ದ್ವಾದಶಿಯಂದರೆ ಹಿಂದುಗಳಿಗೆ ಅತ್ಯಂತ ಶುಭದಿನ. ಈ ದಿನದಂದು ತುಳಸಿ ವಿವಾಹ(ಹಬ್ಬ) ಹೆಸರಿನಲ್ಲಿ ತುಸಿ ಕಟ್ಟೆಯನ್ನು ಕಬ್ಬು, ನೆಲಿಕಾಯಿ, ಹುಣಸೆಕಾಯಿ ಮತ್ತು ಹೂಗಳಿಂದ ಅಲಂಕರಿಸಿ ಪೂಜಿಸುವುದು ಸಂಪ್ರದಾಯವೆಂಬಂತೆ ರೂಢಿಯಲ್ಲಿದೆ.
ಅತ್ಯಂತ ಶೃದ್ಧಾ ಭಕ್ತಿಯಿಂದ ಆಚರಿಸುವ ತುಳಸಿ ಹಬ್ಬ ಕೆಲವರು ದ್ವಾದಶಿಯಂದು ಮತ್ತೆ ಕೆಲವರು ಹುಣ್ಣಿಮೆಯಂದು ಆಚರಿಸುತ್ತಾರೆ. ಆದರೆ ಈ ವರ್ಷ ದ್ವಾದಶಿ ಇಂದು ಮತ್ತು ನಾಳೆ ಎರಡೆರಡು ದಿನ ಬಂದಿರುವುದು ಹೂ ವ್ಯಾಪಾರಿಗಳು ಮುಂಜಾನೆಯಿಂದಲೇ ಕುಮಟಾ ನಗರದ ಮಾಸ್ತಿಕಟ್ಟೆ ಸರ್ಕಲ್ ನಿಂದ ಹಳೆ ಬಸ್ ನಿಲ್ದಾಣದ ವರೆಗೆ ರಸ್ತೆಯ ಎರಡೂ ಕಡೆ ಹೂ ರಾಶಿ ರಾಶಿ ಯಾಕಿರುವುದು ನಗರವನ್ನೇ ಸಿಂಗರಿಸಿದಂತೆ ಕಂಡು ಬರುತ್ತಿದೆ.