ಪರಿವರ್ತನ ಚಾರಿಟೇಬಲ್ ಟ್ರಸ್ಟ್ ನ ಸೇವಾ ಕಾರ್ಯ ಶ್ಲಾಘನೀಯ – ನಿಶ್ಚಲಾನಂದನಾಥ ಸ್ವಾಮೀಜಿ
Art & Culture Finance & Economics Lifestyle Uttara Kannada

ಪರಿವರ್ತನ ಚಾರಿಟೇಬಲ್ ಟ್ರಸ್ಟ್ ನ ಸೇವಾ ಕಾರ್ಯ ಶ್ಲಾಘನೀಯ – ನಿಶ್ಚಲಾನಂದನಾಥ ಸ್ವಾಮೀಜಿ

ಕುಮಟಾ; ಆರ್ಥಿಕವಾಗಿ ಸಬಲರಾದವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರ ಮೂಲಕ ಅವರನ್ನು ಮೇಲಕ್ಕೆತ್ತರಿಸುವ ಕೆಲಸ ಮಾಡುವುದರಿಂದ ಸಂತ್ರಸ್ತರು ಚೇತರಿಕೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮಾನವೀಯ ಸಂಬಂಧ ಕೂಡ ಗಟ್ಟಿಯಾಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ ಮಿರ್ಜಾನ್ ದ ಬ್ರಹ್ಮಚಾರಿ ಶ್ರೀಗಳಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಯವರು ಅಭಿಪ್ರಾಯಪಟ್ಟರು

ಅವರು ಅಪಘಾತದಿಂದ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋಕರ್ಣ ಸಮೀಪದ ಅಂಬುಕೋಣದ ನಿತೀಶ್ ಚಂದ್ರಶೇಖರ್ ಗೌಡ ರವರಿಗೆ ಆರ್ಥಿಕ ನೆರವಿನ ರೂಪದಲ್ಲಿ ಪರಿವರ್ತನ ಚಾರಿಟೇಬಲ್ ಟ್ರಸ್ಟ್ ಗೋಕರ್ಣ ರವರು ನೀಡಿದ 25 ಸಾವಿರ ರೂಪಾಯಿ ಚೆಕ್ ನ್ನು ಅಂಬುಕೋಣದ ನಿತೀಶ್ ರವರ ಮನೆಯಲ್ಲಿ ಅವರ ಕುಟುಂಬಕ್ಕೆ ಹಸ್ತಾಂತರಿಸಿ ಮಾತನಾಡುತ್ತಾ ಮನುಷ್ಯ ಜನ್ಮದಲ್ಲಿ ಕಷ್ಟ ಸುಖಗಳು ಸಹಜ. ಅದರಂತೆ ಸಮಾಜದಲ್ಲಿ ಸಬಲರು ಮತ್ತು ದುರ್ಬಲರು ಇರುವುದು ಕೂಡ ಅಷ್ಟೇ ಸತ್ಯ.


ಆದರೆ ಸಂಕಷ್ಟದಲ್ಲಿರುವವರಿಗೆ ಉಳ್ಳವರು ಸಹಾಯ ಮಾಡುವುದು ಮಾನವೀಯ ಧರ್ಮ. ಈ ದಿಶೆಯಲ್ಲಿ ಸಮಾಜದ ಮುಖಂಡರು ಉದ್ಯಮಿಗಳು ಆದ ಗೋವಿಂದ ಗೌಡರವರು ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿಕೊಂಡು ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸ. ಇವರ ಆದರ್ಶ ಇತರರಿಗೂ ಮಾರ್ಗದರ್ಶಿಯಾಗಿರಲಿ. ಈ ಮೂಲಕ ಸಮಾಜದಲ್ಲಿ ಪರಸ್ಪರ ಸಹಕರಿಸುವ ಮನೋಭಾವ ಮತ್ತಷ್ಟು ಗಟ್ಟಿಯಾಗಿ ಎಲ್ಲರಲ್ಲೂ ಬರಲಿ. ಪ್ರತಿಯೊಬ್ಬರೂ ದುಡಿಮೆಯ ಒಂದಷ್ಟು ಭಾಗ ಉಳಿತಾಯ ಮಾಡಿ ಉತ್ತಮ ಭವಿಷ್ಯಕಂಡುಕೊಳ್ಳಲು ಯೋಚನೆಮಾಡಬೇಕು.   ಇದರಿಂದ ಬದುಕು ಸುಂದರಕ್ಷಣವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ದಿಶೆಯಲ್ಲಿ ಪ್ರಯತ್ನಗಳು ಸಾಗಲಿ ಎಂದು ಆಶೀರ್ವದಿಸಿದರು.ಪರಿವರ್ತನ ಟ್ರಸ್ಟ್ ನ ಮೆನೇಜಿಂಗ್ ಟ್ರಸ್ಟಿ ಗೋವಿಂದ ಗೌಡರವರು ದುಡಿಯುವ ಮಗನು ಅಪಘಾತಕ್ಕೆ ತುತ್ತಾಗಿ ಮಂಗಳೂರಿನಲ್ಲಿ ಚಿಕಿತ್ಸೆಗಾಗಿ ಕುಟುಂಬವು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಆರ್ಥಿಕ ಸಂಕಷ್ಟದಲ್ಲಿರುವ ಸಂಗತಿಯನ್ನು ಕುಟುಂಬದ ಸದಸ್ಯರು ಮನವಿ ಮಾಡಿಕೊಂಡಿದ್ದರು. ಟ್ರಸ್ಟ್ ಅವರ ಆರ್ಥಿಕ ಸ್ಥಿತಿಗತಿ ಇನ್ನಿತರ ಮಾಹಿತಿಯನ್ನು ಸಂಗ್ರಹಿಸಿ ಸದರಿ ಕುಟುಂಬವು ತೊಂದರೆಯಲ್ಲಿರುವುದನ್ನು ಗಮನಿಸಿ ಅವರ ಚಿಕಿತ್ಸೆಗೆ ಅನುಕೂಲವಾಗಲೆಂದು ನಮ್ಮ ಟ್ರಸ್ಟ್ ಮೂಲಕ ಈ ಸಹಾಯ ಮಾಡುತ್ತಿದ್ದೇವೆ. ಟ್ರಸ್ಟ್ ಸಹಕರಿಸುವಾಗ ಮನವಿ ಸಲ್ಲಿಸಿದ್ದರೂ ನಿಜವಾಗಿಯೂ ಅವರಿಗೆ ಆರ್ಥಿಕ ನೆರವಿನ ಅಗತ್ಯತೆ ಇದೆಯೇ ಎಂಬುದನ್ನು ಪರಿಚಿತರು ಇಲ್ಲವೇ ಸ್ಥಳೀಯರ ಮೂಲಕ ಮಾಹಿತಿ ಸಂಗ್ರಹಿಸಿ ನಂತರ ಟ್ರಸ್ಟ್ ನ ಸಭೆಯಲ್ಲಿ ಆ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡ ಮೇಲೆ ನಾವು ಸಹಾಯ ಮಾಡುತ್ತೇವೆ. ಈ ಮೊತ್ತ ಸದ್ಬಳಕೆಯಾಗಿ ಯುವಕ ಮೊದಲಿನಂತೆಓಡಾಡಿ ದುಡಿಯುವಂತಾಗಲಿ ಎಂದು ಆಶಿಸುತ್ತೇನೆ ಎಂದರು.
ಚೆಕ್ ಸ್ವೀಕರಿಸಿದ ಚಂದ್ರಶೇಖರ್ ಗೌಡರವರು ನಮ್ಮ ಮನೆಗೆ ಸ್ವತಃ ಆದಿಚುಂಚನಗಿರಿ ಮಠದ ಸ್ವಾಮೀಜಿಯವರು ಆಗಮಿಸಿರುವುದು ಭವಿಷ್ಯದ ನಮ್ಮ ಕಷ್ಟಕಾರ್ಪಣ್ಯಗಳೆಲ್ಲ ದೂರವಾದವು ಅಂತ ಅಂದುಕೊಂಡಿದ್ದೇನೆ. ಟ್ರಸ್ಟ್ ನ ಸಹಾಯ ನಮ್ಮ ಕುಟುಂಬ ಯಾವತ್ತೂ ಮರೆಯುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಡಾ. ಶ್ರೀಧರ ಗೌಡ. ಫಲಾನುಭವಿಯ ಕುಟುಂಬ ವರ್ಗ, ಸಮಾಜದ ಮುಖಂಡರಾದ ಬಲೀಂದ್ರ ಗೌಡ, ವಿಷ್ಣು ಗೌಡ, ಗಣಪತಿ ಗೌಡ, ಗಣೇಶ ಗೌಡ, ವಿಠ್ಠಲ ಗೌಡ ಉಪಸ್ಥಿತರಿದ್ದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video

This site uses Akismet to reduce spam. Learn how your comment data is processed.