ಪ್ರಕಾಶ್ ನಾಯ್ಕ್ ರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯ ಗರಿ :
Art & Culture Uttara Kannada

ಪ್ರಕಾಶ್ ನಾಯ್ಕ್ ರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯ ಗರಿ :

ಕುಮಟಾ ತಾಲೂಕಿನ ಅಳ್ವೆದಂಡೆಯವರಾದ ಪ್ರಸ್ತುತ ಹೊನ್ನಾವರ ತಾಲೂಕಿನ ಚಿತ್ತಾರದ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿರುವ ಪ್ರಕಾಶ ನಾಯ್ಕ ರವರು 2023-24 ನೇ ಸಾಲಿನಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯಿಂದ ಪುರಸ್ಕೃತ ರಾಗಿದ್ದಾರೆ .
ಪ್ರಾಥಮಿಕ ಶಿಕ್ಷಣವನ್ನು ತಮ್ಮ ಊರಿನಲ್ಲಿ ಪಡೆದುಕೊಂಡು ಕಾಲೇಜು ಶಿಕ್ಷಣಕ್ಕಾಗಿ ಪ್ರತಿಷ್ಠಿತ ಡಾಕ್ಟರ್ ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಓದಿದವರು. ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಮತ್ತು ಇಂಗ್ಲೀಷಿನ ಪ್ರಾಧ್ಯಾಪಕರು ಆಗಿದ್ದ ಪ್ರೊ. ಎಸ್. ಆರ್. ನಾರಾಯಣ್ ರಾವ್ ರವರ ನೆಚ್ಚಿನ ಶಿಷ್ಯರಾಗಿದ್ದರು. ಕಾಲೇಜು ದಿನಗಳಲ್ಲಿಯೇ ಹೊಸಹೊಸ ಪ್ರಯೋಗಗಳಿಗೆ ತನ್ನನ್ನು ತೆರೆದುಕೊಳ್ಳುತ್ತ ಸದಾ ಕ್ರಿಯಾಶೀಲವಾಗಿರುತ್ತಿದ್ದ ಇವರು ತಾನಿರುವ ಕಡೆಗೆಲ್ಲ ಒಂದು ಜೀವಂತ ವಾತಾವರಣ ಸೃಜಿಸಿ ಲವಲವಿಕೆ ತುಂಬುತ್ತಿದ್ದರು… ಆರ್ಟ್ ಸರ್ಕಲ್ , ಎನ್.ಎಸ್.ಎಸ್. ಕ್ಯಾಂಪ್ , ಕಾಲೇಜು ಯುವಜನ ಮೇಳ , ಕಾಲೇಜು ವಾರ್ಷಿಕೋತ್ಸವ.. ಹೀಗೆ ಎಲ್ಲಾ ಕಡೆ ತಮ್ಮನ್ನು ತಾವು ತೊಡಗಿಸಿಕೊಂಡವರು.

.

ತಾವೇ ನಾಟಕ ರಚಿಸಿ ಮಕ್ಕಳಿಗೆ ರಂಗ ತರಬೇತಿ ನೀಡಿ ರಾಜ್ಯ , ರಾಷ್ಟ್ರಮಟ್ಟದಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ಮಾಡಿಸಿದ ಇವರು ತಮ್ಮ ಸ್ವಂತ ಯುಟ್ಯೂಬ್ ಚಾನಲ್ ಮೂಲಕ ವೈವಿಧ್ಯಮಯ ಅರಿವನ್ನು ಹಂಚುತ್ತಿದ್ದಾರೆ.. ಮಕ್ಕಳ ಕಲಿಕೆಗಾಗಿ ಕೈಪಿಡಿ ರಚಿಸಿದ್ದಲ್ಲದೆ ಇಲಾಖೆಯ ಹಲವು ತರಬೇತಿ , ಕೈಪಿಡಿ ರಚನಾ ಕಾರ್ಯದಲ್ಲಿ ಸಂಪನ್ಮೂಲ ಶಿಕ್ಷಕರಾಗಿ ದುಡಿದಿದ್ದಾರೆ. ಮಕ್ಕಳ ರಂಗಭೂಮಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಇವರು ಪ್ರಸಾಧನ , ರಂಗಪರಿಕರ ಸಿದ್ಧತೆಯ ಬಗೆಗೂ ತಿಳಿಸಿಕೊಡುತ್ತಾರೆ. ತಮ್ಮ ವಿಷಯದಲ್ಲಿ ನಿರಂತರವಾಗಿ ಶತಕದ ಸಾಧನೆ ಮಾಡುತ್ತಿರುವುದು ಇವರ ಬೋಧನಾ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ಅರಕಲಗೋಡು ತಾಲೂಕು ಉತ್ತಮ ನೌಕರ ಪ್ರಶಸ್ತಿ , ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ , ಜಿಲ್ಲಾ ಮತ್ತು ವಿಭಾಗಮಟ್ಟದ ಉತ್ತಮ ನಿರ್ದೇಶಕ ಪ್ರಶಸ್ತಿ , ನ್ಯಾಷನಲ್ ಬಿಲ್ಡರ್ ಪ್ರಶಸ್ತಿ , ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ , ಕಾರ್ಕಳ ತಾಲೂಕು ಸಾಧಕ ಪ್ರಶಸ್ತಿ… ಇತ್ಯಾದಿ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಇವರನ್ನು ಹಲವಾರು ಸಂಘಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಕುಟುಂಬ ಸಮೇತವಾಗಿ ತನ್ನ ಪ್ರಶಸ್ತಿಯ ಹಿಂದೆ ಕುಟುಂಬದವರ ಪಾತ್ರವು ಇದೆ ಎಂಬುದನ್ನು ಯಾವುದೇ ಮುಲಾಜಿಲ್ಲದೆ ಹೇಳುತ್ತಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video

This site uses Akismet to reduce spam. Learn how your comment data is processed.