ಕುಮಟಾ : ತಾಲೂಕಿ ದೀವಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಹರ್ಕಡೆ ಗ್ರಾಮದ ಯುಕ್ತಾ ಸತೀಶ ಗೌಡ ಈ ಶೈಕ್ಷಣಿಕ ರ್ಷದ ಬಿಲ್ವಿದ್ಯೆ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಬಿಲ್ವಿದ್ಯೆ ಕುರಿತಂತೆ ಎಲ್ಲರೂ ದಿಟ್ಟಿಸಿ ನೋಡುವಂತೆ ಮಾಡಿದ್ದಾಳೆ. ಆ ಮೂಲಕ ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದ ಲ್ಲಿ ಗುರಿಯಿಡಲು ಮುಂದಡಿ ಇಟ್ಟಿದ್ದಾಳೆ. ಆದರೆ ರಾಷ್ಟ್ರಮಟ್ಟದಲ್ಲಿ ಬಿಲ್ಲುಗಾರಿಕೆಯ ಉತ್ತಮ ಕಿಟ್ ಬಳಸಿ ಪ್ರದರ್ಶನ ನೀಡಲು ಆರ್ಥಿಕ ಹಿಂಜರಿತ ಕಟ್ಟಿಹಾಕಿದೆ.1
ಕುಮಾರಿ ಯುಕ್ತಾ, ಹರಕಡೆ ಮೂಲದ ಹಾಲಕ್ಕಿ ಸಮಾಜದ ಸತೀಶ ಗೌಡ ಹಾಗೂ ನೇತ್ರಾವತಿ ಗೌಡ ದಂಪತಿಗಳ ಮಗಳು. ಉತ್ತಮ ಶೀಕ್ಷಣ ಕೊಡಿಸುವ ಸದುದ್ದೇಶದಿಂದ “ಕೊಂಕಣ ಎಜುಕೇಶನ ಟ್ರಸ್ಟ್ C. V. S. K ಕಲ್ಭಾಗ ಕುಮಟಾ” ಶಾಲೆಗೆ ದಾಖಲು ಮಾಡಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ .
. ಕುಮಾರಿ ಯುಕ್ತಾ “ವನವಾಸಿ ಕಲ್ಯಾಣ (ರಿ) ಕರ್ನಾಟಕ ಸಂಸ್ಥೆ” ಯಾಧಗಿರಿ ಜಿಲ್ಲೆಯ ಸುರಪುರ ತಾಲೂಕಿನ, ತಿಂಥಣಿಯಲ್ಲಿ 8/11/24 ರಿಂದ 10/11/24 ರ ವರೆಗೆ ನಡೆಸಿದ ರಾಜ್ಯ ಮಟ್ಟದ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಭಾಗವಹಿಸಿ ರಾಜ್ಯಕ್ಕೆ 3 ನೇ ಸ್ಥಾನ ಪಡೆದುಕೊಂಡು ಡಿಸೆಂಬರ್ ತಿಂಗಳಿನ 28 ರಿಂದ 31 ರ ವರೆಗೆ ಛತ್ತಿಸ್ಗಡ ದ ರಾಯಪುರ ದಲ್ಲಿ ನೆಡೆಯಲಿರುವ ಅಖಿಲ ಭಾರತೀಯ ಮಟ್ಟದ ವನವಾಸಿಗಳ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾಳೆ.
ಯುಕ್ತಾ, ರಾಷ್ಟ್ರ ಮಟ್ಟದ ಬಿಲ್ವಿದ್ಯೆ ಪ್ರವೀಣ ಅಮಿತ ಜಯಂತ ಗೌಡ ಜಮಗೋಡ ಇವರ ಸಹೋದರಿ. ತಂಗಿಯು ಬಿಲ್ವಿದ್ಯೆಯಲ್ಲಿ ಹೊಂದಿರುವ ಆಸಕ್ತಿಯನ್ನು ಗುರುತಿಸಿದ ಅಮೀತ ಗೌಡರು ಅಪರೂಪದ ಕ್ರೀಡೆಯಾದ ಬಿಲ್ಲುಗಾರಿಕೆ ( Indian Round Archery) ತರಬೇತಿ ನೀಡಿ ಸ್ಪರ್ಧೆಗೆ ಸಜ್ಜುಗೊಳಿಸಿದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಹಲವು ಕ್ರೀಡಾಪಟುಗಳ ನಡುವೆ ಉತ್ತಮ ಪ್ರದರ್ಶನ ನೀಡಿ ರಾಜ್ಯಕ್ಕೆ 3 ನೇ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದಾಳೆ.
ಮುಂದಿನ ಗುರಿ ರಾಷ್ಟ್ರಮಟ್ಟದಲ್ಲಿ ಪದಕ ಪಡೆಯುವುದು ಎಂಬ ಅಚಲ ವಿಶ್ವಾಸದಲ್ಲಿರುವ ಯುಕ್ತಾ ಗೌಡಳಿಗೆ ಬಿಲ್ಲು ಬಾಣದ ಕಿಟ್ ಗೆ ಸುಮಾರು 18000/- ಮೌಲ್ಯ ವಿದ್ದು ಇದು ಪಾಲಕರಿಗೆ ಹೊರೆಯಾಗಿದೆ. ಸಹಾಯ ಮಾಡುವ ಸಂಘ/ಸಂಸ್ಥೆ/ದಾನಿಗಳು ತರಬೇತುದಾರ ಹಾಗೂ ಅವರ ಸಹೋದರ ಅಮಿತ ಗೌಡರವರ ಮೊಬೈಲ್ ಸಂಖ್ಯೆ 7899264661 ಸಂಪರ್ಕಿಸುವುದರ ಮೂಲಕ ನೆರವಿನ ಹಸ್ತ ಚಾಚಿ ಪ್ರತಿಭೆಯನ್ನು ಪ್ರೋತ್ಸಾಹಿಸುವುದರ ಮೂಲಕ ಜಿಲ್ಲೆಯ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಬೆಳಗಲು ಕೈಜೋಡಿಸಬೇಕಾಗಿದೆ.