ಓದಿನ ಹಸಿವು
ಹಿಂಗದ ಓದು
ಬೆಳಕಿನ ಬೀಜ ಆಗಿಹರು
ಬೀದಿಯ ಬೆಳಕು
ಮಸುಕು ಆಗಲಿಲ್ಲ
ಮನದ ಚಿತ್ತವ ಕೆಡಿಸಲಿಲ್ಲ
ಜ್ಞಾನದ ದಾಹ ಬತ್ತಿಸಲಿಲ್ಲ
ಪುಸ್ತಕದ ಭಂಡಾರ
ಮಸ್ತಕವ ಹಿಗ್ಗಿಸಲು
ಬೆಳಕಿನ ಬೀಜವಾಗಿಹೆ ನೀನು
ಪುರೋಹಿತ, ಪಂಡಿತ
ಪಾಮರರ ನಡುವೆಯೂ
ಸಂವಿಧಾನಕ್ಕೆ ನೀ ಶಿಲ್ಪಿಯಾದದ್ದು
ನೀ ಬೆಳಕಿನ ಬೀಜ ಆಗಿರುವುದಕೆ
ಮಡಿವಂತಿಕೆ ಇಲ್ಲದ ಜ್ಞಾನ
ಅಸ್ಪೃಶ್ಯತೆ ತಾಕದ ಬುದ್ಧಿ
ಎತ್ತಿನ ಗಾಡಿಗೆ ಸೋಂಕಿದ ಮೈಲಿಗೆ
ಕೂದಲು ಕತ್ತರಿಸುವ ಕತ್ತರಿಗೆ ಅಂಟಿದ ಮಡಿ
ನಿನ್ನ ಜ್ಞಾನದ ಬೆಳಕಿಗೆ
ಸುಟ್ಟು ಕರಕಲಾದವು
ನೀ ಕರಿಹಲಗೆಯ ಮೇಲೆ ಬರೆದರೆ
ತಿಂಡಿ ಡಬ್ಬ ಮೈಲಿಗೆ ಯಾದ ಭ್ರಮೆ
ಹಲಗೆಯು ಮೈಲಿಗೆ ಆದಾಗ
ಕೋಣೆಯ ಮೂಲೆಯ ಗೋಣಿ ಚೀಲ
ಮಡಿಯಿಂದ ಕೊಡವಿ
ನಿನ್ನ ಓದಿಗೆ ಹಾಸಿಗೆ ಆಯಿತಲ್ಲ
ಬೆಳಕಿನ ಬೀಜ ಭೀಮ
ಅಂಬೇಡ್ಕರ್ ಆದನಲ್ಲ
– ಸಿರಿ
Leave feedback about this