ಹೊನ್ನಾವರ : ಮಠಗಳು ಧಾರ್ಮಿಕ ಶೃದ್ದಾ ಮತ್ತು ಭಕ್ತಿಯ ಕೇಂದ್ರಗಳು. ಮಠಗಳು ಧರ್ಮ ಬೋಧನೆಯ ಜೊತೆಗೆ ಮನುಷ್ಯನನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಕೆಲಸ ಮಾಡುತ್ತವೆ. ಚುಂಚನಗಿರಿ ಮಠ ಅಕ್ಷರ-ಅನ್ನ ಮತ್ತು ಶಿಕ್ಷಣ ದಾಸೋಹಗಳ ಮೂಲಕ ಸೇವೆ ಮಾಡುತ್ತಿವೆ. ಅದರಂತೆ ಮನೆ, ನೆಮ್ಮದಿಯತಾಣ. ಆದಾಗ್ಯೂ ಆಗಾಗ ಮನಸ್ತಾಪ ಇಲ್ಲವೇ ಇನ್ನಿತರ ಕಾರಣಗಳಿಗೆ ಬೇಸರ ಉಂಟಾಗಬಹುದು. ಅಂದ ಮಾತ್ರಕ್ಕೆ ಮನೆ ಬಿಟ್ಟು ಹೋಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮನೆ ಮತ್ತು ಮಠಗಳು ಬದುಕನ್ನು ಕಲಿಸುವ ಕೇಂದ್ರಗಳು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ
ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕೆಳಗಿನೂರಿನಲ್ಲಿ ಆದಿಚುಂಚನಗಿರಿಯ ಎರಡನೇ ಶಾಖಾಮಠದ ಶಿಲಾನ್ಯಾಸ ಮತ್ತು ಒಕ್ಕಲು ಉತ್ಸವಕ್ಕೆ ಚಾಲನೆ ನೀಡಿ ಚುಂಚನಗಿರಿಯ ಶಾಖಾಮಠ ಕಾರ್ಯಪವೃತ್ತವಾದರೆ ಭವಿಷ್ಯದಲ್ಲಿ ಖಂಡಿತವಾಗಿಯೂ ಶ್ರೀ ಮಠದಿಂದ ಒಂದಿಷ್ಟು ಸೇವೆ ಈ ಭಾಗದಲ್ಲಿ ಮಾಡಲು ಸಾಧ್ಯವಾಗುತ್ತದೆ. ಬದುಕಲು ದುಡ್ಡೇ ಮುಖ್ಯವಾದರೂ ವಿದ್ಯೆ ಅವೆಲ್ಲವನ್ನೂ ಮೀರಿ ನಿಂತದ್ದು. ಪಾಲಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವತ್ತ ಗಮನ ಕಾಳಜಿ ವಹಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಂದರು, ಒಳನಾಡು ಸಾರಿಗೆ ಸಚಿವರಾದ ಮಂಕಾಳು ವೈದ್ಯ ಶಿಕ್ಷಣಕ್ಕೆ, ಆರೋಗ್ಯಕ್ಕೆ ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದ
ಆದಿಚುಂಚನಗಿರಿ ಶಾಖಾಮಠ ನನ್ನ ಕ್ಷೇತ್ರದಲ್ಲಿ ಸ್ಥಾಪಿತವಾಗುತ್ತಿರುವದು ಅತಯಂತ ಖುಷಿಯ ಹಾಗೂ ಸಂಭ್ರಮದ ಸಂಗತಿ. ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ, ಬ್ರಹ್ಮಚಾರಿಗಳಾದ ನಿಶ್ಚಲಾನಂದನಾಥ ಸ್ವಾಮೀಜಿಯವರು, ವಕೀಲರು ಮತ್ತು ಸಮಾಜ ಸೇವಕರೂ ಆದ ಕೆ.ಟಿ ಗೌಡ , ರಾಜ್ಯ ಒಕ್ಕಲಿಗರ ಸಂಘದ ನಿರದೇಶಕರಾದ ಧರ್ಮೇಶ ಸಿರಿಬೈಲು , ಹೊನ್ನಾವರ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮಪ್ಪ ಗೌಡ , ಕುಮಟಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಗೋವಿಂದ ಗೌಡ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಕೃಷ್ಣ ಗೌಡ , ಹೊನ್ನಾವರ ತಾಲ್ಲೂಕು ಒಕ್ಕಲಿಗರ ಸಂಘ ಪದಾಧಿಕಾರಿಗಳು ಸಮಾಜದ ಮುಖಂಡರು ಉಪಸ್ಥಿತರಿದ್ದರು.