ಟಿವಿ ನಿರೂಪಕಿ, ಉಪನ್ಯಾಸಕಿ ಚೈತ್ರಾ ಕುಂದಾಪುರ; ಹಿಂದೂ ಫೈರ್‌ಬ್ರಾಂಡ್ ಆಗಿದ್ದು ಹೇಗೆ ?
ಬೆಂಗಳೂರು : ಸದಾ ಹಣೆಗೆ ತಿಲಕ, ಕೊರಳಲ್ಲಿ ಕೇಸರಿ ಶಾಲು ಹೊದ್ದುಕೊಂಡು ಬೆಂಕಿಯುಗುಳುವ ಭಾಷಣ ಮಾಡುವ ಚೈತ್ರಾ ಕುಂದಾಪುರ ಎಂಬ ಹೆಣ್ಮಗಳು ಈಗ ವಂಚನೆ ಕೇಸಿನಲ್ಲಿ ಬಂಧಿತೆಯಾಗಿದ್ದು ಎಲ್ಲರನ್ನು ಹುಬ್ಬೇರಿಸುವಂತಾಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮನೆಮಾತಾಗಿದ್ದ ಚೈತ್ರಾ ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದವರು.
ಹಿಂದುಗಳು ತಮ್ಮ ರಕ್ಷಣೆಗಾಗಿ ತಲವಾರು ಹಿಡಿಯಬೇಕು ಎಂದು ಪ್ರತಿಪಾದಿಸಿದ್ದ ಚೈತ್ರಾ ಕುಂದಾಪುರ ಇಂತಹ ಮಾತುಗಳಿಂದಲೇ ಹಿಂದುಸಂಘಟನೆಗಳಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.
ತಮ್ಮ ಬೆಂಕಿ ಕಾರುವ ಮಾತುಗಳು, ಅಬ್ಬರಿಸಿ ಬೊಬ್ಬಿರಿಯುವ ಶೈಲಿ, ಹಿಂದು ಪರ ವಿಚಾರ ಬಂದಾಗ ಎಗ್ಗಿಲ್ಲದೆ ಮುನ್ನುಗ್ಗುವ ಛಾತಿ, ಎಂಥವರನ್ನೂ ಎದುರು ಹಾಕಿಕೊಳ್ಳಬಲ್ಲ ತಾಕತ್ತು; ಇದು ಅಂದಾಜು 30ರ ಹರೆಯದ ಚೈತ್ರಾ ಕುಂದಾಪುರ ಎಂಬ ಫೈರ್ ಬ್ರಾಂಡ್ ಭಾಷಣಕಾರ್ತಿ ಬಗ್ಗೆ ಆಡಬಹುದಾದ ಪಾಸಿಟೀವ್ ಮಾತುಗಳು. ತಮ್ಮ ಭಾಷಣ ಮತ್ತು ವಿಡಿಯೊಗಳಿಂದ ಅವರು ರಾಜ್ಯದ ಬಹುತೇಕ ಕಡೆಗಳಲ್ಲಿ ಪರಿಚಿತ. ಆದರೆ ಈಗ ಆಕೆ ಸುದ್ದಿಯಾಗಿರುವುದು ಒಂದು ದೊಡ್ಡ ವಂಚನೆಯ ನೆಗೆಟಿವ್ ಪ್ರಕರಣದಲ್ಲಿ.
ಸದಾ ಶಾಲು ಹಾಕಿಕೊಂಡು ತಿರುಗಾಡುವ ಈ ಪೀಚು ದೇಹದ ಹುಡುಗಿಯೊಳಗಿನ ಅಗಾಧ ಧೈರ್ಯದ ಬಗ್ಗೆ ಜನ ಮಾತನಾಡಿಕೊಳ್ಳುವಂತಾಗಿತ್ತು. ಆದರೆ, ಈಗ ಇವಳೊಳಗೆ ಇಷ್ಟು ದೊಡ್ಡ ಕ್ರಿಮಿನಲ್ ವಂಚಕಿ ಇದ್ದಾಳಾ ಎಂದು ಮಾತನಾಡಿಕೊಳ್ಳುವಂತಾಗಿದೆ. ಬೆಂಗಳೂರಿನಲ್ಲಿರುವ ಬೈಂದೂರು ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚಿಸಿ ಸಿಕ್ಕಿಬಿದ್ದಿದ್ದಾಳೆ ಚೈತ್ರಾ ಕುಂದಾಪುರ. ಸದ್ಯ ಇವರು ಆರೋಪಿಯಷ್ಟೇ. ಅವರನ್ನು ಸಿಸಿಬಿ ಪೋಲಿಸರು ಬೆಂಗಳೂರಿಗೆ ಕರೆದೊಯ್ದಾಗ ಪ್ರತಿಕ್ರಿತೆಯೆಗೆ ನೀಡುತ್ತಲೇ ಸ್ವಾಮೀಜಿ ಅರೆಸ್ಟ್ ಆಗಲಿ ಆಗ ಸತ್ಯ ಹೊರಬೀಳುತ್ತದೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಅಂತಲೇ ಬಿರುಸಿನಿಂದ ಹೆಜ್ಜೆ ಹಾಕುತ್ತಲೇ ಒಳನಡೆದರು.ಕುಂದಾಪುರದ ತೆಕ್ಕಟ್ಟೆಯ ಮೂಲದ ಚೈತ್ರಾ ತನ್ನ ಹೆಸರಿನೊಂದಿಗೆ ಕುಂದಾಪುರ ಜೋಡಿಸಿಕೊಂಡು ಎಲ್ಲೇ ಹೋದರು ತನ್ನ ಊರಿನ ಹೆಸರು ಕೇಳದೆಯೇ ತಾನು ಕುಂದಾಪುರದವಳು ಎಂಬುದನ್ನು ಜಾಹಿರಗೊಳಿಸಿದವಳು. . ತೆಕ್ಕಟ್ಟೆಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಶಿಕ್ಷಣವನ್ನು ಪಡೆದ ಬಳಿಕ ಕುಂದಾಪುರದಲ್ಲಿ ಪದವಿ ವಿದ್ಯಾಭ್ಯಾಸ ಪಡೆದವರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಚೈತ್ರಾ ಟಿವಿ ನಿರೂಪಕಿಯಾಗಿ ಸಾಕಷ್ಟು ಗಮನ ಸೆಳೆದಿದ್ದರು. ಬೆಂಗಳೂರಿನ ಸಮಯ ನ್ಯೂಸ್‌ನಲ್ಲಿ ವೃತ್ತಿ ಬದುಕು ಆರಂಭಿಸಿದ ಆಕೆ ಬಳಿಕ ಉಡುಪಿಗೆ ಮರಳಿದ್ದರು. ಅಲ್ಲಿನ ಸ್ಪಂದನ ಟಿವಿ ನಿರೂಪಕಿಯಾಗಿ ಆ ಭಾಗದಲ್ಲಿ ಜನಪ್ರಿಯತೆ ಪಡೆದರು. ಮುಂದೆ ಮುಕ್ತ ನ್ಯೂಸ್‌ನಲ್ಲಿ ಕೆಲಸ ಮಾಡಿದರು. ಈ ನಡುವೆ, ಉದಯವಾಣಿ ದಿನಪತ್ರಿಕೆಯಲ್ಲೂ ಉಪಸಂಪಾದಕಿಯಾಗಿ ಕೆಲಸ ಮಾಡಿದ್ದಾರೆ. ಇದೆಲ್ಲದರ ನಡುವೆ, ಉಡುಪಿಯ ಅಜ್ಜರಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವವೂ ಇದೆ. ನಿರೂಪಕಿ, ಪತ್ರಕರ್ತೆ, ಉಪನ್ಯಾಸಕಿಯಾದ ಆಕೆಗೆ ಯುವ ಮಾಧ್ಯಮ ಪ್ರಶಸ್ತಿಯೂ ಬಂದಿದ್ದು ಆಕೆಯ ವಾಕ್ ಪ್ರಖರತೆಗೆ ಹಿಡಿದ ಕನ್ನಡಿಯಂತಿತ್ತು.
ಚೈತ್ರಾ ಅವರಲ್ಲಿ ಮುನ್ನುಗ್ಗುವ ಛಾತಿ ಕಾಲೇಜುದಿನಗಳಲ್ಲೇ ಇತ್ತು ಎನ್ನುವುದಕ್ಕೆ ಅವರು ಕಾಲೇಜಿನಲ್ಲಿ ಓದುತ್ತಿರುವಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಚೈತ್ರಾ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆಯಾಗುವ ಹಂತಕ್ಕೆ ಬೆಳೆದಿದ್ದರು. ಆಗಲೇ ಭಾಷಣಗಳ ಮೂಲಕ ಗಮನ ಸೆಳೆಯುತ್ತಿದ್ದ ಆಕೆ ನಾಯಕಿಯಾಗಿಯೂ ಹೆಸರಾಗಿದ್ದರು.
ಪತ್ರಿಕೋದ್ಯಮ, ಟಿವಿ ನಿರೂಪಕಿಯ ಕೆಲಸಗಳನ್ನು ಮಾಡುತ್ತಾ ಗಮನ ಸೆಳೆದಿದ್ದ ಚೈತ್ರಾ ಕುಂದಾಪುರ ಕಳೆದ ಆರೇಳು ವರ್ಷಗಳಿಂದ ಫೈರ್ ಬ್ರಾಂಡ್ ಭಾಷಣಕಾರ್ತಿಯಾಗಿದ್ದಾರೆ. ಹಿಂದುತ್ವದ ವಿಚಾರಧಾರೆಗಳನ್ನು ಜನರಿಗೆ ಮುಟ್ಟುವಂತೆ, ಕೆಲವೊಮ್ಮೆ ಕೆರಳಿಸುವಂತೆ, ಪ್ರಚೋದನಾಕಾರಿಯಾಗಿ ಪ್ರತಿಪಾದಿಸುವ ಶೈಲಿ ಅವರದ್ದು. ಭಾಷಣಗಳಲ್ಲಿ ನೇರ ಸವಾಲು ಹಾಕುವ ಧೈರ್ಯವನ್ನೂ ತೋರುತ್ತಾರೆ.
ಲವ್ ಜಿಹಾದ್, ಹಿಜಾಬ್ ಗಲಾಟೆ ವೇಳ ಧ್ವನಿ ಹೆಚ್ಚಿಸಿಕೊಂಡ ಚೈತ್ರಾ:
ಲವ್ ಜಿಹಾದ್‌ಗೆ ಒಳಗಾಗಿ ಹಿಂಸೆ ಅನುಭವಿಸಿ ಮರಳಿದ ಹಲವಾರು ಹೆಣ್ಣು ಮಕ್ಕಳ ಕತೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದ ರೀತಿ ಶೈಲಿ ಅವರನ್ನು ಹಿಂದುಸಂಘಟನೆಯ ಮುನ್ನೆಲೆಯಲ್ಲಿ ಗುರುತಿಸುವಂತೆ ಮಾಡಿತು. ಸಾಮಾಜಿಕ ಜಾಲತಾಣಗಳ ಮೂಲಕ ಕರಾವಳಿ ಮಾತ್ರವಲ್ಲದೆ ಉತ್ತರ ಕರ್ನಾಟಕದಲ್ಲೂ ಚೈತ್ರಾ ಕುಂದಾಪುರ ಹೆಸರು ಪ್ರವಾಹ ಹರಿಸಿತು. . ಲವ್ ಜಿಹಾದ್ ಪ್ರಕರಣಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನೇ ಸಂಘಟಿಸಿದ್ದರು ಚೈತ್ರಾ ಕುಂದಾಪುರ. ಲವ್ ಜಿಹಾದ್ ಪ್ರಕರಣಗಳನ್ನು ಆಧರಿಸಿ ಆಕೆ ಬರೆದಿರುವ ಪ್ರೇಮಪಾಶ ಎನ್ನುವ ಕೃತಿ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು.
ಉಡುಪಿಯಲ್ಲಿ 2021ರಲ್ಲಿ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ ಹಿಜಾಬ್ ಗಲಾಟೆ ಚೈತ್ರಾ ಕುಂದಾಪುರ ಅವರನ್ನು ಇನ್ನಷ್ಟು ಚಾಲ್ತಿಗೆ ಬರುವಂತೆ ಮಾಡಿತು. ಹಲವಾರು ಕಡೆಗಳಲ್ಲಿ ಅವರ ಪ್ರಖರ ಭಾಷಣಗಳು ಸುದ್ದಿ ಮಾಡಿದವು. ಇದರ ಜತೆಗೆ ಗೋ ಹತ್ಯೆ ವಿರುದ್ಧ ಧ್ವನಿ ಎತ್ತುವುದರ ಮೂಲಕ ಕಟ್ಟರ್ ಹಿಂದುತ್ವವಾದಿಯಾಗಿ ಗುರುತಿಸಿಕೊಂಡರು.
ಆದರೆ ಮಾಸಗಳು ಸರಿದಂತೆ ಕರಾವಳಿಯಲ್ಲಿ ಅವರ ಪ್ರಖರತೆ ಕಡಿಮೆಯಾಯಿತು ಅನ್ನುವುದಕ್ಕಿಂತ ಉತ್ತರ ಕರ್ನಾಟಕದಲ್ಲಿ ಹೆಚ್ಚು ಸದ್ದು ಮಾಡಿದರು. ಅಲ್ಲಿನ ಕೆಲವು ಸಂಘಟನೆಗಳು, ಸ್ವಾಮೀಜಿಗಳು, ರಾಜಕಾರಣಿಗಳು ಆಕೆಯ ಬೆಂಬಲಕ್ಕೆ ನಿಂತಿರುವುದು ಇದಕ್ಕೆ ಕಾರಣ. ಅಲ್ಲಿ ಆಕೆಯ ಹವಾ ಯಾವ ಪ್ರಮಾಣದಲ್ಲಿತ್ತು ಎಂದರೆ ಚೈತ್ರಾ ಕುಂದಾಪುರ ಭಾಷಣಕ್ಕೆ, ಆಗಮನಕ್ಕೆ ನಿರ್ಬಂಧ ವಿಧಿಸಿದ್ದ ಘಟನೆಗಳೂ ನಡೆದಿದ್ದವು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪೂಜೆ, ಪುನಸ್ಕಾರಗಳ ವಿಚಾರದಲ್ಲಿ ವಿವಾದ ಎದ್ದಾಗ ಚೈತ್ರಾ ಕುಂದಾಪುರ ಒಂದು ಗುಂಪಿನೊಂದಿಗೆ ಗುರುತಿಸಿಕೊಂಡು ಪ್ರಚೋದನಾಕಾರಿಯಾಗಿ ಮಾತನಾಡಿದ್ದು ಅದು ಸ್ಥಳೀಯ ಹಿಂದೂ ಮುಖಂಡರನ್ನು ಕೆರಳಿಸಿತ್ತು. ಒಂದು ಹಂತದಲ್ಲಿ ಈ ಜಗಳ ಸುಬ್ರಹ್ಮಣ್ಯಕ್ಕೆ ಬಾ ನೋಡಿಕೊಳ್ಳುತ್ತೇವೆ ಎನ್ನುವ ಮಟ್ಟವನ್ನೂ ತಲುಪಿತ್ತು. ಆಗ ಅಲ್ಲಿನ ಹಿಂದೂ ಜಾಗರಣ ವೇದಿಕೆ ನಾಯಕರೇ ಆಕೆಯನ್ನು ಹಿಮ್ಮೆಟ್ಟಿಸಿದ್ದರು. ಒಂದು ದೊಡ್ಡ ಗ್ಯಾಂಗ್ ಕಟ್ಟಿಕೊಂಡು ಬಂದಿದ್ದ ಚೈತ್ರಾ ಕುಂದಾಪುರ ಅವರನ್ನು ಎಳೆದುಕೊಂಡು ಹೋಗಿ ಜೈಲಿಗೆ ಹಾಕಿದ ಸನ್ನಿವೇಶಗಳು ದಾಖಲಾಗಿದ್ದವು. ಅದಾದ ಬಳಿಕ ಆಕೆಯ ಪ್ರಭಾವ ಈ ಭಾಗದಲ್ಲಿ ತಗ್ಗಿತ್ತು. ಕ್ರಮೇಣ ಹಿಂದೂ ಸಂಘಟನೆಗಳು ಆಕೆಯಿಂದ ಅಂತರ ಕಾಯ್ದುಕೊಂಡವು. ಆದಾಗ್ಯೂ ತನ್ನದೇ ಆದ ಕೂಟವನ್ನು ಕಟ್ಟಿಕೊಂಡು ಚೈತ್ರಾ ಮುನ್ನಡೆಯುತ್ತಿದ್ದುದು ಆಕೆಯ ಕೆಚ್ಚೆದೆಯಯನ್ನು ಅನಾವರಣಗೊಳಿಸಿತ್ತು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪೂಜೆ, ಪುನಸ್ಕಾರಗಳ ವಿಚಾರದಲ್ಲಿ ವಿವಾದ ಎದ್ದಾಗ ಚೈತ್ರಾ ಕುಂದಾಪುರ ಒಂದು ಗುಂಪಿನೊಂದಿಗೆ ಗುರುತಿಸಿಕೊಂಡು ಪ್ರಚೋದನಾಕಾರಿಯಾಗಿ ಮಾತನಾಡಿದ್ದು ಅದು ಸ್ಥಳೀಯ ಹಿಂದೂ ಮುಖಂಡರನ್ನು ಕೆರಳಿಸಿತ್ತು. ಒಂದು ಹಂತದಲ್ಲಿ ಈ ಜಗಳ ಸುಬ್ರಹ್ಮಣ್ಯಕ್ಕೆ ಬಾ ನೋಡಿಕೊಳ್ಳುತ್ತೇವೆ ಎನ್ನುವ ಮಟ್ಟವನ್ನೂ ತಲುಪಿತ್ತು. ಆಗ ಅಲ್ಲಿನ ಹಿಂದೂ ಜಾಗರಣ ವೇದಿಕೆ ನಾಯಕರೇ ಆಕೆಯನ್ನು ಹಿಮ್ಮೆಟ್ಟಿಸಿದ್ದರು. ಒಂದು ದೊಡ್ಡ ಗ್ಯಾಂಗ್ ಕಟ್ಟಿಕೊಂಡು ಬಂದಿದ್ದ ಚೈತ್ರಾ ಕುಂದಾಪುರ ಅವರನ್ನು ಎಳೆದುಕೊಂಡು ಹೋಗಿ ಜೈಲಿಗೆ ಹಾಕಿದ ಸನ್ನಿವೇಶಗಳು ದಾಖಲಾಗಿದ್ದವು. ಅದಾದ ಬಳಿಕ ಆಕೆಯ ಪ್ರಭಾವ ಈ ಭಾಗದಲ್ಲಿ ತಗ್ಗಿತ್ತು. ಕ್ರಮೇಣ ಹಿಂದೂ ಸಂಘಟನೆಗಳು ಆಕೆಯಿಂದ ಅಂತರ ಕಾಯ್ದುಕೊಂಡವು. ಆದಾಗ್ಯೂ ತನ್ನದೇ ಆದ ಕೂಟವನ್ನು ಕಟ್ಟಿಕೊಂಡು ಚೈತ್ರಾ ಮುನ್ನಡೆಯುತ್ತಿದ್ದುದು ಆಕೆಯ ಕೆಚ್ಚೆದೆಯಯನ್ನು ಅನಾವರಣಗೊಳಿಸಿತ್ತು.
ವಂಚನೆಯ ಜಾಲಕ್ಕೆ ಸಿಕ್ಕ ಚೈತ್ರಾ ;
ಹಿಂದುತ್ವ, ಲವ್ ಜಿಹಾದ್ ಹೆಸರಿನಲ್ಲಿ ಮುನ್ನೆಯುತ್ತಿದ್ದ ಚೈತ್ರಾ ಕುಂದಾಪುರ ಈಗ ಸುದ್ದಿಯಾಗಿರುವುದು ಒಂದು ವಂಚನೆಯ ಪ್ರಕರಣದಲ್ಲಿ. ಬೈಂದೂರು ಮೂಲದ ಬೆಂಗಳೂರಿನ ಉದ್ಯಮಿ ಗೋವಿಂದ ಪೂಜಾರಿ ಅವರು ಸಮಾಜ ಸೇವಕರಾಗಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಕಣಕ್ಕಿಳಿಯಲು ಆಸಕ್ತರಾಗಿದ್ದರು. ಹಿತೈಷಿಗಳ ಸಲಹೆ ಮೇರೆಗೆ ಅವರು ಚೈತ್ರಾ ಕುಂದಾಪುರ ಅವರನ್ನು ಸಂಪರ್ಕಿಸಿದ್ದರು ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ದರು. ತನಗೆ ಬಿಜೆಪಿ, ಆರೆಸ್ಸೆಸ್‌ನ ಉನ್ನತ ಮಟ್ಟದ ನಾಯಕರ ಸಂಪರ್ಕ ಇರುವುದಾಗಿ
ಒಬ್ಬ ನಕಲಿ ಬಿಜೆಪಿ ರಾಷ್ಟ್ರೀಯ ನಾಯಕನನ್ನು ಸೃಷ್ಟಿಸಿದರು. ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿಯ ಹಿರೇಹಡಗಲಿ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ ಅವರನ್ನು ಬಳಸಿಕೊಂಡರು. ಹೀಗೆ ಮೂವರು ವ್ಯಕ್ತಿಗಳ ಮೂಲಕ ಗೋವಿಂದ ಪೂಜಾರಿ ಅವರಿಂದ ಒಟ್ಟು 5 ಕೋಟಿ ರೂ. ವಸೂಲಿ ಮಾಡಿದರು. ಟಿಕೆಟ್ ಸಿಗದೆ ಕಂಗಾಲಾದ ಗೋವಿಂದ ಪೂಜಾರಿ ಅವರು ತಾವೇ ಸ್ವಯಂ ತನಿಖೆ ನಡೆಸಿದಾಗ ವಂಚನೆಯ ಎಲ್ಲ ಜಾಲಗಳು ಬಯಲಾದವು. ಈಗ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಪ್ರಮುಖ ಆಪಾದಿತರಾಗಿ ಸಿಕ್ಕಿ ಬಿದ್ದಿದ್ದಾರೆ.ಹೇಳಿಕೊಳ್ಳುತ್ತಿರುವ ಚೈತ್ರಾ ಕುಂದಾಪುರ ಮತ್ತು ತಂಡದವರು ಈ ಮನವಿಯನ್ನು ದುಡ್ಡು ಮಾಡುವ ದಂಧೆಯಾಗಿ ಪರಿವರ್ತಿಸಲು ಪ್ಲ್ಯಾನ್ ಮಾಡಿಕೊಂಡರು. ಈ ರೀತಿ ಟಿಕೆಟ್ ಗಿಟ್ಟಿಸಿಕೊಳ್ಳಲು ಆರೆಸ್ಸೆಸ್‌ನ ಉನ್ನತ ನಾಯಕರು, ಬಿಜೆಪಿ ಉನ್ನತ ನಾಯಕರು ಸ್ವಾಮೀಜಿಗಳ ಶಿಫಾರಸು ಬೇಕು ಎಂಬ ಸಬೂಬು ನೀಡಿದರು. ಚಿಕ್ಕಮಗಳೂರಿನಲ್ಲಿ ಒಬ್ಬ ನಕಲಿ ಆರ್‌ಎಸ್‌ಎಸ್ ಪ್ರಚಾರಕನನ್ನು ಸೃಷ್ಟಿ ಮಾಡಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ ಅವರಿಂದ ಐದು ಕೋಟಿ ರೂ. ಪಡೆದು ವಂಚನೆ ಮಾಡಿದ ಆರೋಪದಲ್ಲಿ ಚೈತ್ರಾ ಕುಂದಾಪುರ ಮತ್ತು ಇತರ ಐವರ ಬಂಧನವಾಗಿದೆ. ಚೈತ್ರಾ ಕುಂದಾಪುರ ಅವರು ಬಂಧನಕ್ಕೆ ಒಳಗಾಗುವ ಮುನ್ನ ಉಡುಪಿ ಕಾಂಗ್ರೆಸ್‌ನ ಮಾಧ್ಯಮ ವಕ್ತಾರೆ ಸುರಯ್ಯ ಅಂಜುಂ ಅವರ ಮನೆಯಲ್ಲಿದ್ದರು ಎಂಬ ಮಾತು ಕೇಳಿಬಂದಿತ್ತು. ಆದರೆ, ಸುರಯ್ಯ ಅವರು ಇದನ್ನು ಸ್ಪಷ್ಟವಾಗಿ ಮಾಧ್ನಿಯಮಗಳ ಮುಖಾಂತರವೇ ನಿರಾಕರಿಸಿದ್ದಾರೆ.ಹಿಂದು ಅಜೆಂಡಾದ ಪ್ರಬಲ ಪ್ರತಿಪಾದಕಿಯಾಗಿರುವ ಚೈತ್ರಾ ಮತ್ತು ಕಾಂಗ್ರೆಸ್‌ನ ವಕ್ತಾರೆಯಾಗಿದ್ದು ಎಲ್ಲರೊಂದಿಗೆ ಸ್ನೇಹ ಭಾವ ಹೊಂದಿರುವ ಸುರಯ್ಯ ಅಂಜುಂ ನಿಜ ಜೀವನದಲ್ಲಿ ಗೆಳತಿಯರಾಗಿರುವುದು ನಿಜ ಎನ್ನಲಾಗುತ್ತಿದೆ. ನಿಜವೆಂದರೆ ಹಲವಾರು ವಿಷಯಗಳಲ್ಲಿ ಸುರಯ್ಯ ಮತ್ತು ಚೈತ್ರಾ ಕುಂದಾಪುರ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡುತ್ತಾರೆ. ಆದರೆ, ಮಾನವೀಯ ಸಂಬಂಧ ಬಂದಾಗ ಗೆಳತಿಯರಾಗಿರುತ್ತಾರೆ ಎನ್ನಲಾಗಿದೆ. ಈ ಹಿಂದೆ ಅವರಿಬ್ಬರು ಒಂದೇ ಮಾಧ್ಯಮ ಸಂಸ್ಥೆಯಲ್ಲಿ ಜತೆಯಾಗಿ ಕೆಲಸ ಮಾಡಿದಾಗ ಹುಟ್ಟಿದ ಸಂಬಂಧ. ಬಳಿಕ ಅವರು ಸಿದ್ಧಾಂತ ಆಧರಿತವಾಗಿ ಭಿನ್ನ ದಾರಿ ಹಿಡಿದರೂ ಅದು ಆತ್ಮೀಯತೆಗೆ ತೊಡಕಾಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆಯಾಗಿ ಚೈತ್ರಾ ಕುಂದಾಪುರ ರವರ ವಂಚನೆಯ ಜಾಲ ಬೆನ್ನತ್ತಿದ್ದವರಿಗೆ ಅಗೆದಷ್ಟು ಆಳವಾಗಿ ಬಗೆದಷ್ಟು ವಿಶಾಲವಾಗುತ್ತಿರುವುದು ಮೂಲ ಹುಡುಕುವುದೇ ಹರಸಾಹಸವಾಗಿದೆ. ತಮ್ಮ ಹರಿತವಾದ ಮಾತಿನ ಪ್ರಖರತೆಯಿಂದಲೇ ಮನೆಮಾತಾಗಿದ್ದ ಚೈತ್ರಾ ಕುಂದಾಪುರ ಈ ರೀತಿ ಅಡ್ಡ ದಾರಿ ಹಿಡಿಯುತ್ತಾಳೆ ಎಂದು ಯಾರೂ ಊಹಿಸಿರಲಾರರು. ಟಿಕೆಟ್ ಆಕಾಂಕ್ಷಿಗಳು ಕೇವಲ ಚೈತ್ರಾ ಮಾತ್ರವಲ್ಲದೆ ಇನ್ನೂ ಹಲವು ಮುಖಂಡರಿಗೆ ಹಣ ನೀಡಿ ಅತ್ತ ಟಿಕೆಟ್ ಇಲ್ಲದೆ ಇತ್ತ ದುಡ್ಡು ವಾಪಸ್ಸು ಬರದೇ ಕೈ ಕೈ ಹಿಸುಕಿಕೊಂಡು ಸುಮ್ಮನಿದ್ದಾರೆ ಎಂಬ ಒಳಮನೆಯ ಚರ್ಚೆ ಗುಟ್ಟಾಗಿ ಉಳಿದಿಲ್ಲ. ಅವನ್ನು ಬೆಂಬತ್ತಿ ಹೋದರೆ ಇನ್ನಷ್ಟು ವಂಚಕರು ಪರಪ್ಪನ ಅಗ್ರಹಾರ ಸೇರುತ್ತಾರೆ ಎಂಬುದಂತು ಸುಳ್ಳಲ್ಲ.
Leave feedback about this