ಶಿರ್ಶಿ ಕಾನೂನು ವಿದ್ಯಾರ್ಥಿಗಳಿಂದ ಸಂಸದ ಕಾಗೇರಿಗೆ ಮನವಿ ;
General News Uncategorized Uttara Kannada

ಶಿರ್ಶಿ ಕಾನೂನು ವಿದ್ಯಾರ್ಥಿಗಳಿಂದ ಸಂಸದ ಕಾಗೇರಿಗೆ ಮನವಿ ;

ಸಿರಸಿ : ಎಮ್. ಇ. ಎಸ್.‌ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಸ್‌ ಪಾಸ್‌ ಮಾರ್ಗ ವಿಸ್ತರಣೆ ಮಾಡಿಕೊಡುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಮಾಡಿಕೊಂಡರು.  ಕಾಗೇರಿಯವರು

ಕೇಂದ್ರ ಸರಕಾರದ ಯೋಜನೆಗಳ ಜಾಗೃತಿ ಕುರಿತು ಕೇಂದ್ರ ಸಂವಹನ ಇಲಾಖೆ ಶಿವಮೊಗ್ಗ ರವರು ಕಾನೂನು ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ಕಾರ್ಯಕ್ರಮದ ಭಾಗವಹಿಸಿದ್ದ ಸಂದರ್ಭದಲ್ಲಿ ಹಾನಗಲ್‌, ಹಾವೇರಿ ಆನವಟ್ಟಿ, ಹುಬ್ಬಳ್ಳಿ ಮಾರ್ಗದಿಂದ ವಿದ್ಯಾರ್ಥಿಗಳು  ಕಾಲೇಜಿಗೆ ಬರುತ್ತಿದ್ದು ಇಲ್ಲಿಗೆ ಬಸ್‌ ಪಾಸ್‌ ಕೊನೆಗೊಳ್ಳುತ್ತದೆ. ಆದರೆ ಇಂಟರ್‌ ಶಿಪ್‌ ಗೋಸ್ಕರ ನ್ಯಾಯಾಲಯಕ್ಕೆ ಮತ್ತು ಇನ್ನಿತರ ಆಫೀಸ್‌ ಗಳಿಗೆ ಹೋಗಿಬರುವುದು ಅನಿವಾರ್ಯವಾಗಿದೆ. ಕಾನೂನು ಮಹಾವಿದ್ಯಾಲಯವು ಶಿರಸಿ ನಗರದಿಂದ ಮೂರು ಕಿ.ಮಿ. ಅಂತರದಲ್ಲಿದೆ. ಇದರಿಂದ ತಾವು ಹಣ ತೆತ್ತು ನಗರಕ್ಕೆ ಹೋಗಬೇಕಾಗುತ್ತದೆ. ವಿದ್ಯಾರ್ಥಿಗಳಾದ ತಮಗೆ ಇದು ಹೊರೆಯಾಗಿದೆ. ಆದ್ದರಿಂದ ತಮ್ಮ ಬಸ್‌ ಪಾಸ್‌ ನ್ನು ಶಿರ್ಶಿ ನಗರ ತನಕ ವಿಸ್ತರಿಸಿ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಂಡರು. ಸಕಾರಾತ್ಮಕ ಸ್ಪಂದಿಸಿದ ಸಂಸದರು ವಿದ್ಯಾರ್ಥಿಗಳ ಬಸ್‌ ಪಾಸ್‌ ವಿಸ್ತರಣೆ ಮಾಡಿಕೊಡುವ ಭರವಸೆ ಯಿತ್ತರು.