ಬೆಂಗಳೂರು : ದಶಕಗಳ ಹಿಂದೆ ಭಾರತದಲ್ಲಿ ಕ್ರಿಕೆಟ್ ಅಂದರೆ ಸಚಿನ್ ತೆಂಡೂಲ್ಕರ್ , ದಾಖಲೆಗಳೆಂದರೆ ತೆಂಡುಲ್ಕರ್ ಎಂಬ ಮಾತು ಜನಜನಿತವಾಗಿತ್ತು. ಆದರೆ ಈಗ ಕ್ರಿಕೆಟ್ ಎಂದರೆ ವಿರಾಟ್ ಎಂಬ ವಿರಾಟ್ ಸ್ವರೂಪ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ವಿರಾಟ್ ಕೊಹ್ಲಿಯ ಜನಪ್ರಿಯತೆಗೆ ಭಾರತದಲ್ಲಿ ಯಾರೂ ಸರಿಸಮಾನರಲ್ಲ. ಅವರಿಗೆ ಅಷ್ಟೊಂದು ಅಭಿಮಾನಿಗಳಿದ್ದಾರೆ. ಅವರು ಇತ್ತೀಚೆಗೆ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು (49) ಶತಕಗಳನ್ನು ಗಳಿಸಿದ ಸಚಿನ್ ತಂಡೂಲ್ಕರ್ ಅವರ ಸಾಧನೆಯನ್ನು ಮೀರಿಸಿದ್ದಾರೆ. ಇದೀಗ ಅವರ ಸಾಧನೆಗಳ ಕಿರೀಟಕ್ಕೆ ಹೊಸ ಗರಿಯೊಂದು ಸೇರ್ಪಡೆಯಾಗಿದೆ. ಸ್ಟಾರ್ ಬ್ಯಾಟರ್ ಕ್ರೀಡಾ ಇತಿಹಾಸದಲ್ಲಿ ಸಾರ್ವಕಾಲಿಕ ಅಗ್ರ 10 ಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮುಹಮ್ಮದ್ ಅಲಿ, ಕ್ರಿಸ್ಟಿಯಾನೊ ರೊನಾಲ್ಡೊ,
ಲಿಯೋನೆಲ್ ಮೆಸ್ಸಿ, ಮೈಕ್ ಟೈಸನ್, ಉಸೇನ್ ಬೋಲ್ಟ್ ಮತ್ತು ಸೆರೆನಾ ವಿಲಿಯಮ್ಸ್ ಅವರಂತಹ ಕ್ರೀಡಾಪಟುಗಳು ಈ ಪಟ್ಟಿಯಲ್ಲಿದ್ದಾರೆ. ಕೊಹ್ಲಿ ಈ ಪಟ್ಟಿಯಲ್ಲಿರುವ ಅಥ್ಲೀಟ್ಗಳ ಪೈಕಿ ಏಕೈಕ ಕ್ರಿಕೆಟರ್. ಪಬ್ಟಿ ಸ್ಪೋರ್ಟ್ಸ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಲಿಸ್ಟ್ನಲ್ಲಿ ಕ್ರಿಕೆಟ್ ಶ್ರೇಷ್ಠ 5 ನೇ ಸ್ಥಾನದಲ್ಲಿದ್ದಾರೆ. ಆಘಾತಕಾರಿ ವಿಷಯವೆಂದರೆ ವಿರಾಟ್ ಕೊಹ್ಲಿ ಆಯಾ ಕ್ರೀಡೆಗಳ ಗೋಟ್ ಪಟ್ಟಿಯಲ್ಲಿ ಮುಂಚೂಣಿ ಸ್ಥಾನದಲ್ಲಿದ್ದಾರೆ. ಉಸೇನ್ ಬೋಲ್ಟ್ (ಓಟಗಾರ ) , ಮೈಕ್ ಟೈಸನ್ (ಬಾಕ್ಸರ್)) ಲೆಬ್ರಾನ್ ಜೇಮ್ಸ್ (ಬ್ಯಾಸ್ಕೆಟ್ಬಾಲ್), ಸೆರೆನಾ ವಿಲಿಯಮ್ಸ್ (ಟೆನಿಸ್ ಆಟಗಾರ್ತಿ) ಮತ್ತು ಮೈಕೆಲ್ ಫೆಲ್ಪ್ಸ್ (ಒಲಿಂಪಿಕ್ ಈಜುಪಟು) ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ ಎಂಬುದೇ ಅಚ್ಚರಿ. ಕ್ರೀಡಾಪಟುಗಳಲ್ಲಿ ವಿರಾಟ್ ಕೊಹ್ಲಿ ವಿಶ್ವದಾದ್ಯಂತ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರೆಟಿ. ಅವರು ಇನ್ಸ್ಟಾಗ್ರಾಂ ನಲ್ಲಿ ಅಪ್ ಲೋಡ ಮಾಡುವ ಒಂದೊಂದು ಪೋಸ್ಟ್ ಗೆ ಕೋಟ್ಯಾಂತರ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿರುವುದು ಅವರ ಜನಪ್ರಿಯತೆಯನ್ನು ಸಾದರಪಡಿಸಿದೆ.
Leave feedback about this