ಶಿರಸಿ : ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವರಾದ ದ ರಾಜನಾಥ್ ಸಿಂಗ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಕಾರವಾರದ ಸೀಬರ್ಡ್ ನೌಕಾನೆಲೆಯಿಂದ ಉಂಟಾಗಿರುವ ಸಮಸ್ಯೆಯ ಕುರಿತು ಚರ್ಚಿಸಿದರು
ಪ್ರಮುಖವಾಗಿ ಬಾಕಿ ಇರುವ ಭೂ ಪರಿಹಾರವನ್ನು ತಕ್ಷಣವೇ ನೀಡುವಂತೆ ಹಾಗೂ ಬಾಕಿ ಇರುವ ನಾನಾ ಸಮಸ್ಯೆಗಳ ಕಡತಗಳನ್ನು ಅತಿ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಮನವರಿಕೆ ಮಾಡಿದರು. ನೌಕಾ ನೆಲೆಗಾಗಿ ಭೂಮಿ ಕಳೆದುಕೊಂಡವರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಸಿ ಬರ್ಡ್ ನೌಕಾನೆಲೆಯಲ್ಲಿ ನಡೆಯುವ ಉದ್ಯೋಗ ಪರೀಕ್ಷಾ ಕೇಂದ್ರವನ್ನು ಕಾರವಾರದಲ್ಲಿಯೇ ಸ್ಥಾಪಿಸಬೇಕೆಂದು ಮನವಿ ನೀಡಿದರು. ಇದಕ್ಕೆ ರಕ್ಷಣಾ ಮಂತ್ರಿಗಳಾದ ರಾಜನಾಥ್ ಸಿಂಗ್ ಅವರು ಸಕಾಋಾತ್ಮಕವಾಗಿ ಸ್ಪಂದಿಸಿ ಅಧಿಕಾರಿಗಳಿಗೆ ಸೂಚನೆ ನೀಡಿ ನಿರ್ದೇಶನ ಮಾಡಿದರು ಮತ್ತು ಮುಂದಿನ ದಿನಗಳಲ್ಲಿ ಸಮಸ್ಯೆಯುಂಟಾದಲ್ಲಿ ತುರ್ತುಗತಿಯಲ್ಲಿ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದರು