ಗೋಕರ್ಣ; ದೋಣಿ ಬೈಲ್ ಕುಜನಿ ಹೊಟೇಲ್ ಮಾಲೀಕರ ಸಂಘ ದಿಂದ ಪ್ರವಾಸಿ ತಾಣ ಗೋಕರ್ಣದ ಓಂ ಬೀಚ್ ನಲ್ಲಿ ದೋಣಿ ಬೈಲ್ ಕುಜನಿ ಹೊಟೇಲ್ ಮಾಲೀಕರ ಸಂಘದಡಿಯಲ್ಲಿ ಹಮ್ಮಿಕೊಳ್ಳಲಾಯಿತು.
ಮುಂಜಾನೆ ಏಳು ಗಂಟೆಯಿಂದ ಪ್ರಾರಂಭವಾದ ಸ್ವಚ್ಛತಾ ಅಭಿಯಾನ 11 ಗಂಟೆ ವರೆಗೂ ನಡೆಯಿತು. ಓಂ ಬೀಚ್ ನ ಪಾರ್ಕಿಂಗ್ ಏರಿಯಾದ ಸುತ್ತಮುತ್ತಲು ಮತ್ತು ರಸ್ತೆಯಿಂದ ಸಮುದ್ರ ಸೇರುವ ಮಾರ್ಗ ಹಾಗೂ ಕಡಲ ಕಿನಾರೆಯ ಉದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಕವರ್ ಸೇರಿದಂತೆ ಇನ್ನಿತರ ನಿರುಪಯುಕ್ತ ವಾಗಿ ಬಿದ್ದಿದ್ದ ವಸ್ತುಗಳನ್ನು ಸಂಗ್ರಹಿಸಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ಸಂಗ್ರಹಿಸಿದ ಕಸವನ್ನು ಬುಲೆರೋ ವಾಹನದಲ್ಲಿ ತುಂಬಿ ಗೋಕರ್ಣ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ
ಗೋವಿಂದ ಗೌಡರು ಗೋಕರ್ಣಕ್ಕೆ ಬರುವ ಪ್ರವಾಸಿಗರು ಪ್ರವಾಸಿ ತಾಣವನ್ನು ವೀಕ್ಷಿಸಿ ಆನಂದಿಸಬೇಕು. ತಮ್ಮೊಟ್ಟಿಗೆ
ತರುವ ನೀರಿನ ಬಾಟಲ್, ಆಹಾರದ ಪೊಟ್ಟಣಗಳನ್ನು ಉಪಯೋಗಿಸಿದ ನಂತರ ಕಸದ ತೊಟ್ಟಿಯಲ್ಲಿ ಹಾಕುವ ಪರಿಪಾಠ ಬೆಳೆಸಿ ಕೊಳ್ಳಬೇಕು. ಇದರಿಂದ ಸುತ್ತಮುತ್ತಲಿನ ಪರಿಸರವೂ ಚೆನ್ನಾಗಿರುತ್ತದೆ ನಮ್ಮ ಆರೋಗ್ಯ ಕೂಡ ಉತ್ತಮವಾಗಿರಲು ಸಾಧ್ಯವಾಗುತ್ತದೆ ಎಂದರು.
ಗೋಕರ್ಣ ಕಡಲ ತೀರಕ್ಕೆ ಕೇವಲ ನಮ್ಮ ರಾಜ್ಯ, ರಾಷ್ಟ್ರದವರಷ್ಟೇ ಅಲ್ಲ . ರಷ್ಯಾ, ಇಟಲಿ, ಜರ್ಮನ್ ಸೇರಿದಂತೆ ಜಗತ್ತಿನ ನಾನಾ ರಾಷ್ಟ್ರಗಳಿಂದ ಪ್ರವಾಸಿಗರು ಬರುತ್ತಾರೆ. ಇಲ್ಲಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ನಿಸರ್ಗದ ಸೌಂದರ್ಯವನ್ನು ಎಲ್ಲರೂ ಖುಷಿಯಿಂದ ಆನಂದಿಸುವಂತೆ ಮಾಡಬೇಕು. ಸ್ವಚ್ಛತೆ ಕುರಿತಂತೆ ಈ ಸಂಘವು ಆಗಾಗ ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡುತ್ತಾ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ವಿಶೇಷ. ಈ ಸೇವಾಕಾರ್ಯಕ್ರಮದಲ್ಲಿ ಸಂಘದ ಎಲ್ಲಾ ಸದಸ್ಯರುಗಳು ಪಾಲ್ಗೊಳ್ಳುವುದರ ಮೂಲಕ ತಮ್ಮ ಕರ್ತವ್ಯ ಬದ್ದತೆಯನ್ನು ಯಶಸ್ವಿಗೊಳಿಸಿದ್ದಾರೆ ಎಂಬುದಕ್ಕೆ ಸಂತೋಷವಾಗುತ್ತದೆ ಎಂದರು. ಈ ಅಭಿಯಾನದಲ್ಲಿ ನಮಸ್ತೆ ಕೆಫೆ ಮಾಲೀಕ ಗೋವಿಂದ ಗೌಡ, ಸುಬೋಧ್ ಶೆಟ್ಟಿ, ಸ್ವ ಸ್ವರ ಸಿಬ್ಬಂದಿಗಳು, ನಮಸ್ತೆ ಕೆಫೆ ಸಿಬ್ಬಂದಿಗಳು, ಸುರೇಶ್ ಗೌಡ, ಸುಕ್ರು ಗೌಡ, ನಾಗೇಶ ಗೌಡ, ಪ್ರಶಾಂತ್ ಮಾಂಜ್ರೇಕರ್ ಹಾಗೂ ವಿದೇಶಿಗರೂ ಸೇರಿದಂತೆ 25ಕ್ಕೂ ಹೆಚ್ಚು ಸದಸ್ಯರುಗಳು ಹಾಜರಿದ್ದರು.