ಪದ್ಮಶ್ರೀ ವೃಕ್ಷ ಮಾತೆ ಡಾ. ತುಳಸಿ ಗೌಡ
Art & Culture General News Karnataka National

ಪದ್ಮಶ್ರೀ ವೃಕ್ಷ ಮಾತೆ ಡಾ. ತುಳಸಿ ಗೌಡ

ವೃಕ್ಷಮಾತೆ ಶ್ರೀಮತಿ ತುಳಸಿ ಗೌಡರವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಾಳಿ ಗ್ರಾಮದವರು. ಸಮೀಪದ ಅರಣ್ಯ ಇಲಾಖೆಯಲ್ಲಿ ದಿನಗೂಲಿಯಾಗಿ ಕೆಲಸಕ್ಕೆ ಸೇರಿಕೊಂಡು ನರ್ಸರಿ ವಿಭಾಗದಲ್ಲಿ ತೊಡಗಿಸಿಕೊಂಡರು. ಗಿಡಗಳ ಮೇಲಿನ ಪ್ರೀತಿ ಅರಣ್ಯೀಕರಣದಲ್ಲಿ ತುಳಸಿ ಗೌಡರು ಮುಂಚೂಣಿಯಲ್ಲಿರಲು ಕಾರಣವಾಯಿತು. ಲಕ್ಷಾಂತರ ಗಿಡಮರಗಳನ್ನು ಬೆಳೆಸಿರುವ ಇವರು ಕಾಡಿನಲ್ಲಿ ಯಾವ ಗಿಡ ಎಷ್ಟು ಎತ್ತರಕ್ಕೆ ಬೆಳೆಯಬಲ್ಲುದು? ಎಷ್ಟು ವರ್ಷ ಬದುಕುತ್ತದೆ? ಅದರ ಉಪಯೋಗಗಳೇನು? ಈ ಮುಂತಾದ ಸಂಗತಿಗಳನ್ನು ನಿರರ್ಗಗಳವಾಗಿ ತಿಳಿಸಬಲ್ಲರು. ಅವರನ್ನು ಕಾಡಿನ ವಿಶ್ವಕೋಶ ಎಂದೇ ಗುರುತಿಸಲಾಗಿದೆ. ಇವರ ಕಾಡಿನ ಪ್ರೀತಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸುವಂತೆ ಮಾಡಿದೆ. ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಮತ್ತು ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಹಾಲಕ್ಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ ತುಳಸಿ ಗೌಡರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ದೆಹಲಿಯ ರಾಷ್ಟ್ರಪತಿ ಅಂಗಳಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಚಪ್ಪಳಿಯನ್ನೂ ಸಹ ಧರಿಸದೇ ಬರಿಗಾಲಿನಲ್ಲಿ ಹೋಗಿದ್ದು ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.

ಕೃಷಿ ವಿಶ್ವವಿದ್ಯಾಲಯ, ಧಾರವಾಡ ಮತ್ತು ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ, ಕಲಬುರ್ಗಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಪುರಸ್ಕರಿಸಿದೆ. ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತರಾದ ಮೇಲೆ ರಾಜ್ಯದ ಮೂಲೆ, ಮೂಲೆಯಿಂದ ಅವರನ್ನು ಭೇಟಿಯಾಗಿ ಮರಗಳ ಸಂರಕ್ಷಣೆ ಕುರಿತು ಮಾಹಿತಿ ಪಡೆಯಲು ಅವರ ಸ್ವಗ್ರಾಮ ಹೊನ್ನಾಳಿಗೆ ಹುಡುಕಿಕೊಂಡು ಬರುತ್ತಾರೆ. ಸರಕಾರದ ಆಡಳಿತ ಕಛೇರಿ, ಶಿಕ್ಷಣ ಸಂಸ್ಥೆಗಳು, ಸಂಘ-ಸಂಸ್ಥೆಗಳು ತುಳಸಿ ಗೌಡರನ್ನು ಕಾರ್ಯಕ್ರಮ ಆಹ್ವಾನಿಸುತ್ತಾರೆ. ಅವರನ್ನು ಭೇಟಿಯಾದವರಿಗೆ ಹಾಗೂ ವೇದಿಕೆಯಲ್ಲಿ ಹೇಳುವ ಮಾತೆಂದರೆ “ಕಾಡಿದ್ದರೆ ಮಾತ್ರ ಮಳೆ, ಬೆಳೆ. ಪ್ರತಿಯೊಬ್ಬರೂ ಗಿಡನೆಟ್ಟು ಪೋಷಿಸಬೇಕು. ಮನೆ ಮುಂದೆ ಜಾಗ ಇಲ್ಲದಿದ್ದರೆ ಕುಂಡದಲ್ಲಾದರೂ ಗಿಡನೆಟ್ಟು ಬೆಳೆಸಬೇಕು” ಈ ಮಾತನ್ನು ಕೇಳಿದಾಗ ತುಳಸಿ ಗೌಡರಿಗೆ ವೃಕ್ಷಮಾತೆ ಎಂಬ ಬಿರದು ಸಾರ್ಥಕತೆ ಪಡೆದಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video

This site uses Akismet to reduce spam. Learn how your comment data is processed.