ಗೋಕರ್ಣ : ಪುರಾಣ ಪ್ರಸಿದ್ದ ಗೋಕರ್ಣದ ಕೋಟಿತೀರ್ಥದಲ್ಲಿರುವ ಕೋಟೇಶ್ವರ ದೇವರ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ನಡೆಯಿತು.
ಕೋಟಿತೀರ್ಥದ ಮಧ್ಯದಲ್ಲಿರುವ ಸುತ್ತೆಲ್ಲಾ ಹಣತೆ ಮತ್ತು ವಿದ್ಯತ್ ದೀಪಾಲಂಕಾರದಿಂದ ಅಲಂಕರಿಸಿದ್ದು ಭಕ್ತರನ್ನು ಆಕರ್ಷಿಸಿತು. ಕೋಟೇಶ್ವರ ದೇವರಲ್ಲಿ ಹೋಗಿ ಪೂಜೆಸಲ್ಲಿಸಲು ದೋಣಿಯ ವ್ಯವಸ್ಥೆ ಮಾಡಿದ್ದು ಇದರಿಂದ ಸಾವಿರಾರು ತೀರ್ಥದ ಮಧ್ಯ ಹೋಗಿ ದೇವರ ದರ್ಶನ ಪಡೆದರು. ರಾತ್ರಿ ಯಕ್ಷಗಾನ ನಡೆಯಿತು.