ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರದ ಅಪಪ್ರಚಾರ  :  ಶಾಸಕ ದಿನಕರ ಶೆಟ್ಟಿ
General News Karnataka Uncategorized

ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರದ ಅಪಪ್ರಚಾರ  :  ಶಾಸಕ ದಿನಕರ ಶೆಟ್ಟಿ

ಕುಮಟಾ: ಕೆಲವೊಂದು ಮಾಧ್ಯಮ ಮತ್ತು ವಾಹಿನಿಗಳಲ್ಲಿ ತನ್ನವಿರುದ್ದ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲಎಂದು ಶಾಸಕ ದಿನಕರ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ಅವರು ಮಂಗಳವಾರ ಮಾಧ್ಯಮದೊಂದಿಗೆ ಮಾತನ್ನಾಡುತ್ತಾ ಕುಮಟಾ ಕ್ಷೇತ್ರದಲ್ಲಿ ಬೇರೆ ಪಕ್ಷದಿಂದ ಬಂದವರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡಬಾರದು ಎನ್ನುವ ಸುದ್ದಿ ಹರಡಿರುವುದು ನನಗಂತೂ ಬೇಸರ ತಂದಿದೆ. ನಾನು ಭಾರತೀಯ ಜನತಾ ಪಕ್ಷಕ್ಕೆ ಬಂದನಂತರ ಪಕ್ಷಕ್ಕಾಗಿ ಹಗಲಿರುಳು ನಿಸ್ವಾರ್ಥತೆಯಿಂದ ದುಡಿಯುತ್ತಿದ್ದೇನೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರುಹಾಗೂ ಮುಖಂಡರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದೇನೆ. ನನ್ನ ಮೈನಲ್ಲಿ ಹರಿಯುತ್ತಿರುವುದು ಹಿಂದು ರಕ್ತ.

ನಾನೊಬ್ಬ ಹಿಂದುವಾಗಿ ಭಾರತೀಯ ಜನತಾ ಪಕ್ಷದ ತತ್ವ,ಸಿದ್ದಾಂತಗಳನ್ನು ಒಪ್ಪಿಕೊಂಡು ಕಾರ್ಯನಿಹಿಸುತ್ತಿದ್ದೇನೆ, ನನ್ನ ಅವಧಿಯಲ್ಲಿ ಗ್ರಾ.ಪಂ,ಪುರಸಭೆ ಸೇರಿದಂತೆ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಭಾರತೀಯ ಜನತಾ ಪಕ್ಷಅಧಿಕಾರದಲ್ಲಿ ಬರುವಂತೆ ಮಾಡಿದ್ದೇನೆ. ಸಾಮಾನ್ಯ ಕಾರ್ಯಕರ್ತರನ್ನು ಅತ್ಯಂತ ಗೌರವ ಪೂರ್ವಕವಾಗಿನಡೆಸಿಕೊಳ್ಳುತ್ತಿದ್ದೇನೆ. ಸಂಘದ ಪ್ರಮುಖರಾದ ದತ್ತಾತ್ರೇಯ ಹೊಸಬಾಳೆಯವರು ಕುಮಟಾಕ್ಕೆ ಬಂದ ಸಂದರ್ಭದಲ್ಲಿ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಾಗಿದೆ.ಇನ್ನೂ ಮೂರು ವರ್ಷ ಅವಧಿ ಇದೆ ಅದರ ಬಗ್ಗೆ ಚರ್ಚೆ ಬೇಡ ಎಂದು ಅವರು ಹೇಳಿದ್ದಾರೆ. ಈಗಾಗಲೇ ನಾನು ಭಾರತೀಯ ಜನತಾ ಪಕ್ಷಕ್ಕೆ ಬಂದು ಎಂಟು ವರ್ಷಗಳಾಗಿವೆ. ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ.ಹಿಂದಿನ ಬಾರಿನನಗೆ ಎರಡನೇ ಬಾರಿ ಯಾರು ಸೀಟು ಸಿಗೋದಿಲ್ಲ, ಸಿಕ್ಕಿದರೂ ಗೆಲ್ಲುವದಿಲ್ಲ ಎಂದು ಅಪಪ್ರಚಾರ ಯಾರು ಮಾಡಿದ್ದರೋ ಅವರೇ ಇವತ್ತು ಈ ಸುದ್ದಿಯನ್ನು ಹರಿಬಿಟ್ಟಿದ್ದಾರೆ ಎಂಬುದು ನನ್ನ ಸಂದೇಹ. ಅವರು ಮೊದಲು ನಾನು ಮಾಡಿದ ಒಳ್ಳೆಯ ಕಾರ್ಯಗಳನ್ನು ಪರಿಶೀಲನೆ ಮಾಡಿಕೊಳ್ಳಲಿ. ನಾನು ಬಂದ ನಂತರ ಕುಮಟಾ ಪುರಸಭೆ ಮತ್ತು ಹೊನ್ನಾವರ ಪಟ್ಟಣ ಪಂಚಾಯತದಲ್ಲಿಬಹುಮತ ಬರುವಂತೆ ನೋಡಿಕೊಂಡಿದ್ದೇನೆ. ಪಕ್ಷದ ಎಲ್ಲಾ ಕಾರ್ಯಕರ್ತರು ನನಗೆ ಶಕ್ತಿಯನ್ನು ತುಂಬಿದ್ದಾರೆ.
ನಮ್ಮಪಕ್ಷದ ಕಾರ್ಯಕರ್ತರು ಎಲ್ಲರೂ ಒಟ್ಟಾಗಿ ನನಗೆ ಸಹಕಾರ ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷವಿರೋಧಿ ನೀತಿಯನ್ನು ಅನುಸರಿಸಿಲ್ಲ. ಪಕ್ಷ ಯಾವುದೇ ರೀತಿಯ ಸೂಚನೆ ನೀಡಿದರೂ ಪಾಲಿಸಿದ್ದೇನೆ. ಕಳೆದ ಬಾರಿ 2024 ರ ವಿಧಾನ ಸಭೆಯ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಗಾಗಿ ಯಾವುದೇ ಲಾಭಿ ಮಾಡಿಲ್ಲ.ಟಿಕೆಟ್ ಪಡೆಯಲು ದೆಹಲಿ ಅಥವಾ ಬೆಂಗಳೂರಿಗೆ ಹೋಗಿ ಪ್ರಯತ್ನಿಸಿಲ್ಲ. ಮನೆಯಲ್ಲೇ ಕುಳಿತಾಗ ಟಿ.ವಿ ಯಲ್ಲಿ ನನಗೆ ಟಿಕೆಟ್ ಸಿಕ್ಕ ವಿಚಾರ ತಿಳಿದು ಕಾರ್ಯಪ್ರವೃತ್ತನಾದೆ. ಈ ರೀತಿ ಅಪಪ್ರಚಾರ ಮಾಡುವವರು ನಮ್ಮ ಪಕ್ಷದವರೇ ಎನ್ನುವುದು ಖೇಧಕರ. ನನಗೆ ಪಕ್ಷ ಮುಖ್ಯ. ಬಹಳಷ್ಟು ಅಭಿವೃದ್ದಿ ಕಾರ್ಯ ಮಾಡಿದ್ದೇನೆ, ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಆಶಯ. ನನಗೆ ಶಾಸಕನಾಗಬೇಕು ಎನ್ನುವ ವ್ಯಾಮೋಹವಿಲ್ಲ. ಅಧಿಕಾರ ಇದ್ದರೂ,ಇಲ್ಲದಿದ್ದರೂ ಹಿಂದುತ್ವಕ್ಕಾಗಿ ಕೆಲಸ ಮಾಡುವೆ.ನಮ್ಮನೆಚ್ಚಿನ ಪ್ರಧಾನಿ ಮೋದಿಯವರ ನೆರಳಲ್ಲಿ ರಾಜಕಾರಣ ಮಾಡುವ ಇರಾಧೆ ಹೊಂದಿದ್ದೇವೆ. ಕಾರಣ ನನ್ನ ವಿರುದ್ದಅಪಪ್ರಚಾರ ಮಾಡುವವರು ಇನ್ನಾದರೂ ವಾಸ್ತವಿಕತೆ ಅರಿತುಕೊಳ್ಳಲಿ ಎಂದರು.
ಈ ಸಂಧರ್ಭದಲ್ಲಿ ಮಾಜಿ ಪುರಸಭಾಧ್ಯಕ್ಷೆ ಮೋಹಿನಿ ಗೌಡ,ಮಿರ್ಜಾನ ಗ್ರಾ.ಪಂ ಸದಸ್ಯ ಗಣೇಶ ಅಂಬಿಗ, ಸುಭಾಸ ಅಂಬಿಗ,ಲಕ್ಷ್ಮಣ ಅಂಬಿಗ ಇನ್ನಿತರರು ಇದ್ದರು