ಕುಮಟಾ : ತಾಲೂಕಿನ ಮಿರ್ಜಾನ ಖಂಡಗಾರ ಮೂಲದ ನೀತಾ ನಿಲೇಶ್ ಭೋಸ್ಲೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಅವರ ಹೆಚ್ಚಿನ ಚಿಕಿತ್ಸೆಗೆ ಪರಿವರ್ತನಾ ಚಾರಿಟೇಬಲ್ ಟ್ರಸ್ (ರಿ) ಗೋಕರ್ಣದ ವತಿಯಿಂದ ಮೆನೆಜಿಂಗ್ ಟ್ರಸ್ಟಿ ಗೋವಿಂದ ಗೌಡರವರು ಹದಿನೈದು ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದರು.

ಕುಮಟಾದ ಡಾ. ಮಣಕಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಕುಟುಂಬದವರು ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡಿದ್ದು ಕ್ಯಾನ್ಸರ್ ಸೌಲಭ್ಯಹೊಂದಿರುವ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದನ್ನು ಮನಗಂಡು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದ ಅಸಹಾಯಕ ಪರಿಸ್ಥಿತಿಯನ್ನು ವೈದ್ಯರಾದ ಡಾ. ಪ್ರಶಾಂತ ಮಣಕಿಕರರವರು ಟ್ರಸ್ಟ್ ಸಂಪರ್ಕಿಸಿ ನೆರವು ನೀಡಲು ವಿನಂತಿಸಿದ್ದರು. ಅದರಂತೆ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಬಂದು ರೋಗಿ ಪರವಾಗಿ ಅವರ ತಾಯಿ ಪ್ರೇಮಾ ನಾಯ್ಕರವರಿಗೆ ಚೆಕ್ ನೀಡಿದರು. ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಶ್ರೀಧರ ಗೌಡ, ವಿಕ್ಟೋರಿಯಾ ಹಾಗೂ ಆಸ್ಪತ್ರೆಯ ಶ್ರೇಯಾ ಪ್ರಶಾಂತ ಮಣಕಿಕರರವರು ಉಪಸ್ಥಿತರಿದ್ದರು.