ಪದ್ಮಶ್ರೀ ವೃಕ್ಷ ಮಾತೆ ಡಾ. ತುಳಸಿ ಗೌಡ
ವೃಕ್ಷಮಾತೆ ಶ್ರೀಮತಿ ತುಳಸಿ ಗೌಡರವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಾಳಿ ಗ್ರಾಮದವರು. ಸಮೀಪದ ಅರಣ್ಯ ಇಲಾಖೆಯಲ್ಲಿ ದಿನಗೂಲಿಯಾಗಿ ಕೆಲಸಕ್ಕೆ ಸೇರಿಕೊಂಡು ನರ್ಸರಿ ವಿಭಾಗದಲ್ಲಿ ತೊಡಗಿಸಿಕೊಂಡರು. ಗಿಡಗಳ ಮೇಲಿನ ಪ್ರೀತಿ ಅರಣ್ಯೀಕರಣದಲ್ಲಿ ತುಳಸಿ ಗೌಡರು ಮುಂಚೂಣಿಯಲ್ಲಿರಲು ಕಾರಣವಾಯಿತು. ಲಕ್ಷಾಂತರ ಗಿಡಮರಗಳನ್ನು ಬೆಳೆಸಿರುವ ಇವರು ಕಾಡಿನಲ್ಲಿ ಯಾವ ಗಿಡ ಎಷ್ಟು ಎತ್ತರಕ್ಕೆ ಬೆಳೆಯಬಲ್ಲುದು? ಎಷ್ಟು ವರ್ಷ ಬದುಕುತ್ತದೆ? ಅದರ ಉಪಯೋಗಗಳೇನು? ಈ ಮುಂತಾದ ಸಂಗತಿಗಳನ್ನು ನಿರರ್ಗಗಳವಾಗಿ ತಿಳಿಸಬಲ್ಲರು. ಅವರನ್ನು ಕಾಡಿನ ವಿಶ್ವಕೋಶ ಎಂದೇ ಗುರುತಿಸಲಾಗಿದೆ. ಇವರ ಕಾಡಿನ