Articles
Articles Business Uncategorized Uttara Kannada

ಜಿಲ್ಲೆಯಲ್ಲಿ ಬಗೆಹರಿಯದ ಮರಳು ಸಮಸ್ಯೆ : ಕರಾವಳಿಯಲ್ಲೂ ಎಂ ಸ್ಯಾಂಡ್ ನತ್ತ ಕಟ್ಟಡ ಮಾಲಿಕರ ಚಿತ್ತ.

ಕುಮಟಾ; ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಾಡಿದರಂತೆ ಎನ್ನುವುದು ಮರಳಿನ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಅಕ್ಷರ ಅನ್ವಯವಾಗುವ ಗಾದೆ ಮಾತು. ಸರಕಾರದ ಇಬ್ಬಗೆಯ ನೀತಿಯಿಂದ ಹೈರಾಣ ಆಗಿದ್ದು ಕಟ್ಟಡ ಮಾಲೀಕರು. ಮರಳು ಕಣ್ ಮುಂದೆ ಣುತ್ತಿದ್ದರೂ ಅದು ಕೈಗೆ ಸಿಗದೆ ನೂರಾರು ಕಿಲೋಮೀಟರ್ ದೂರದಿಂದ ಅರ್ಧಕ್ಕೆ ನಿಂತಿರುವ ಕಾಮಗಾರಿ ಮುಗಿಸಲು ಹಾಗೂ ತುರ್ತಾಗಿ ಮುಗಿಸಲೇ ಬೇಕಾದ ಕಾಮಗಾರಿ ನಿರ್ವಹಿಸಲು ಹೆಚ್ಚುವರಿಯಾಗಿ ಹಣ ತೆತ್ತು ಎಂ ಸ್ಯಾಂಡ್ ನತ್ತ ಗವನಹರಿಸಿರುವುದು ಜಿಲ್ಲೆಯ ಯಾವುದೇ ಸಮಸ್ಯೆಗೂ ಉತ್ತರ

Read More
Articles General News Karnataka Uncategorized Uttara Kannada

ಮತ್ತೆ ಚರ್ಚೆಗೆ ಬಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು: ಡಾ. ಕುಸುಮ ಸೊರಬ ರಂತೆ ಗಟ್ಟಿ ನಿಲುವು ತಾಳುವರೇ ಡಾ. ಜಿ. ಜಿ. ಹೆಗಡೆ 

ಕುಮಟಾ; ಉತ್ತರ ಕನ್ನಡ ಜಿಲ್ಲೆ ಇಲ್ಲಿಯವರೆಗೂ ಯಾವುದೇ ಹೋರಾಟಕ್ಕೂ ಉತ್ತರ ಕಾಣದ ಜಿಲ್ಲೆಯಾಗಿದೆ ಎಂಬುದು ಜಾಗತಿಕ ಸತ್ಯ. ಕರಾವಳಿ, ಬಯಲು ಸೀಮೆ ಮತ್ತು ಮಲೆನಾಡು ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡ ಭೌಗೋಳಿಕವಾಗಿ ಅತ್ಯಂತ ವಿಸ್ತಾರ ಹಾಗೂ ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾದ ಜಿಲ್ಲೆ. ಇಲ್ಲಿಯ ನೆಲ, ಜಲ ಬಳಸಿಕೊಂಡು ಇಲ್ಲಿನ  ಜನರಿಗೆ ಮಾರಕವಾಗುವ ಹಲವಾರು ಯೋಜನೆಗಳು ಪ್ರಬಲ ವಿರೋಧದ ನಡುವೆಯೂ ಸ್ಥಾಪಿತಗೊಂಡಿವೆ. ಕೈಗಾ ಅಣು ವಿದ್ಯುತ್ ಸ್ಥಾವರ ಸಂದರ್ಭದಲ್ಲಿ ಯೋಜನೆಯನ್ನು ವಿರೋಧಿಸಿ ಪರಿಸರದ ಅಕ್ಕ ಡಾ ಕುಸುಮ ಸೊರಬ ಹಲವಾರು

Read More
Art & Culture Articles General News Karnataka Uncategorized

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೊ. ರು. ಚನ್ನಬಸಪ್ಪ:

ಮಂಡ್ಯ : ಸಾಹಿತಿಗಳಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳ ಆಡಳಿತಗಾರರಾಗಿ ಈ ನಾಡಿನಲ್ಲಿ ಹೆಸರಾದ ಗೊ.ರು. ಚೆನ್ನಬಸಪ್ಪ ರವರು ಡಿಸೆಂಬರ ತಿಂಗಳು ೨೦ ರಿಂದ ೨೨ ರ ವರೆಗೆ ಮಂಡ್ಯದಲ್ಲಿ ನಡೆಯಲಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯೇತರಿಗೆ ಮಣೆ ಹಾಕಲಾಗುವ ಸಂಬಂಧ ಹಿಟ್ಟಿಕೊಂಡ ಚರ್ಚೆಗೆ ಇತೀಶ್ರೀ ಹಾಕಲಾಗಿದೆ. ಬಾಲ್ಯ ಜೀವನ  :  ಗೊ. ರು. ಚೆನ್ನಬಸಪ್ಪನವರು ಚಿಕ್ಕಮಗಳೂರು

Read More
Art & Culture Articles Karnataka Uttara Kannada

ಗೋಕರ್ಣ ಭಾಗದ   ತುಳಸಿ ಪೂಜೆಗೆ ಹಾಲಕ್ಕಿಗರ ವಿಶೇಷ ಮೆರಗು :

ಗೋಕರ್ಣ : ಕಾರ್ತಿಕ ಮಾಸದಲ್ಲಿ ಆಚರಿಸುವ  ತುಳಸಿ ಪೂಜೆ ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಒಂದು. ಸಾಮಾನ್ಯವಾಗಿ ತುಳಸಿ ಹಬ್ಬ ಒಂದು ದಿನಕ್ಕೆ ಸೀಮಿತವಾಗಿರುವುದು. ಆದರೆ ಗೋಕರ್ಣ ಭಾಗದ ಹಾಲಕ್ಕಿ ಸಮಾಜದಲ್ಲಿ ಮೂರು ದಿನಗಳ ಕಾಲ ತುಳಸಿ ಮದುವೆಯನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಸಂಪ್ರದಾಯಬದ್ದವಾಗಿ ಆಚರಿಸುವುದು ವಿಶೇಷ.ದ್ವಾದಶಿಯಂದು ಮುಂಜಾನೆಯಿಂದಲೇ ಪೂಜೆಯ ಸಿದ್ದತೆ, ತುಳಸಿ ಕಟ್ಟೆ ಸುತ್ತಲೂ ಸಗಣಿಯಿಂದ ಸಾರಿಸಿ, ಹಲಿಯ ರಂಗವಲ್ಲಿ ಹಾಕಿ ಮಹಿಳೆಯರು ಆರಂಭಿಕ ಸಿದ್ದತೆ ಮಾಡಿದರೆ ಮಧ್ಯಾಹ್ನದಿಂದ ಪುರುಷರು ಕಬ್ಬು, ಗೊಂಡೆ ಹೂವಿನ ಮಾಲೆಗಳಿಂದ

Read More
Art & Culture Articles General News Health & Medicine Uttara Kannada

ಓಂ ಬೀಚ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ;

ಗೋಕರ್ಣ; ದೋಣಿ ಬೈಲ್ ಕುಜನಿ ಹೊಟೇಲ್ ಮಾಲೀಕರ ಸಂಘ ದಿಂದ ಪ್ರವಾಸಿ ತಾಣ ಗೋಕರ್ಣದ ಓಂ ಬೀಚ್ ನಲ್ಲಿ ದೋಣಿ ಬೈಲ್ ಕುಜನಿ ಹೊಟೇಲ್ ಮಾಲೀಕರ ಸಂಘದಡಿಯಲ್ಲಿ ಹಮ್ಮಿಕೊಳ್ಳಲಾಯಿತು. ಮುಂಜಾನೆ ಏಳು ಗಂಟೆಯಿಂದ ಪ್ರಾರಂಭವಾದ ಸ್ವಚ್ಛತಾ ಅಭಿಯಾನ 11 ಗಂಟೆ ವರೆಗೂ ನಡೆಯಿತು. ಓಂ ಬೀಚ್ ನ ಪಾರ್ಕಿಂಗ್ ಏರಿಯಾದ ಸುತ್ತಮುತ್ತಲು ಮತ್ತು ರಸ್ತೆಯಿಂದ ಸಮುದ್ರ ಸೇರುವ ಮಾರ್ಗ ಹಾಗೂ ಕಡಲ ಕಿನಾರೆಯ ಉದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಕವರ್ ಸೇರಿದಂತೆ ಇನ್ನಿತರ ನಿರುಪಯುಕ್ತ ವಾಗಿ

Read More
Articles Current Affairs Discussion General News Health & Medicine Karnataka Politics Uttara Kannada

ಕುಮಟಾ ರೇಲ್ವೆ ಸ್ಟೇಶನ್‌ ರಸ್ತೆಗೆ ಮೂಗು ಮುಚ್ಚಿಯೇ  ಸಾಗಬೇಕು ಇಲ್ಲದಿದ್ದರೆ ವಾಕರಿಕೆ ಗ್ಯಾರಂಟಿ :

ಕುಮಟಾ : ಉತ್ತರ ಕನ್ನಡ ಜಿಲ್ಲೆಯಲ್ಲಿ ಬಸ್‌ ನಿಲ್ದಾಣಕ್ಕೆ ಅತೀ ಹತ್ತಿರದಲ್ಲಿರುವ ರೇಲ್ವೆಸ್ಟೇಶನ್‌ ಎಂದರೆ ಕುಮಟಾ ಸ್ಟೇಶನ್.‌ ಕೇವಲ 100 ಮೀಟರ್‌ ಅಂತರದಲ್ಲಿರುವ ಸ್ಟೇಶನ್‌ ಗೆ ಆಟೋ, ಕಾರುಗಳಲ್ಲಿ ಹೋಗುವವರಿಗಿಂತ ಪಾದಚಾರಿಗಳ ಸಂಖ್ಯೆಯೇ ಅಧಿಕ.  ಅದಲ್ಲದೆ  ವಿದ್ಯಾಧಿರಾಜ ಪಾಲಿಟೆಕ್ನಿಕ್‌ ಕಾಲೇಜಿಗೆ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿಯೇ ಸಾಗುತ್ತಾರೆ. ಇಷ್ಟೆಲ್ಲಾ ಅನುಕೂಲವಿದ್ದರೂ ಈ ಮಾರ್ಗದಲ್ಲಿ ಸಾಗುವಾಗ ಮೂಗು ಮುಚ್ಚಿಯೇ  ಸಾಗಬೇಕು ಇಲ್ಲದಿದ್ದರೆ ವಾಕರಿಕೆ ಗ್ಯಾರಂಟಿ. ಬೇಕಿದ್ದರೆ ನೀವೂ ಪರೀಕ್ಷೀಸಬಹುದು. ರಾಷ್ಟ್ರೀಯ ಹೆದ್ದಾರಿಯಿಂದ ರೇಲ್ವೆ ರಸ್ತೆಗೆ ಸಾಗುತ್ತಿದ್ದಂತೆ ಎಡಗಡೆ ಪ್ಲಾಸ್ಟಿಕ್‌ ಕಸದ

Read More
Articles Current Affairs General News Karnataka Politics Sport Uttara Kannada

ರಾಷ್ಟ್ರ ಮಟ್ಟಕ್ಕೆ  ಆಯ್ಕೆಯಾದ  ಅಥ್ಲಿಟ್‌ ಗಳನ್ನು ಗೌರವಿಸಲು  ಜಿಲ್ಲೆಯ ಸಚಿವ ಹಾಗೂ ಶಾಸಕರ ಜಾಣ ಮರೆವು :

ಕುಮಟಾ :  ರಾಜ್ಯಮಟ್ಟದ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಕುಮಟಾದಿಂದ ಸುಪ್ರಿಯಾ ಶಂಕರ್ ಗೌಡ- 400 ಮೀ. ಓಟ  ಹೊನ್ನಾವರದ  ಧರ್ಮೇಂದ್ರ ಸುಬ್ರಾಯ ಗೌಡ ತ್ರಿವಿಧ ಜಿಗಿತ  ಹಾಗೂ ಅಂಕೋಲಾದ ಪ್ರಕಾಶ ಸೀತಾರಾಮ ಗೌಡ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು  ಫೆಬ್ರವರಿಯಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ರಾಷ್ಟ್ರಮಟ್ಟಕ್ಕೆ  ಜಿಲ್ಲೆಯಿಂದ  ಆಯ್ಕೆಯಾಗಿರುವ ಈ ಪ್ರತಿಭೆಗಳಿಗೆ  ಶಿಕ್ಷಣ ಇಲಾಖೆ ಕನಿಷ್ಠ ಗೌರವ ನೀಡದೇ ಇರುವುದರ ಹಿಂದೆ ಜಿಲ್ಲೆಯ ಸಚಿವರ ಹಾಗೂ ಶಾಸಕರ

Read More
Art & Culture Articles Karnataka Uttara Kannada

ರಾಷ್ಟ್ರ ಮಟ್ಟಕ್ಕೆ ಜಿಲ್ಲೆಯ  ಮೂವರು ಪ್ರೌಢಶಾಲಾ ಅಥ್ಲಿಟ್‌ ಗಳು, ಕನಿಷ್ಠ ಗೌರವ ನೀಡದ ಶಿಕ್ಷಣ ಇಲಾಖೆ :

ಕುಮಟಾ :  ಡಿಸೆಂಬರ್‌ ಮೊದಲ ವಾರದಲ್ಲಿ ಪುತ್ತೂರಿನಲ್ಲಿ ನಡೆದ ರಾಜ್ಯಮಟ್ಟದ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಕುಮಟಾ ತಾಲೂಕಿನ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಪ್ರಿಯಾ ಶಂಕರ್ ಗೌಡ- 400 ಮೀ. ಓಟ ಸ್ಪರ್ಧೆಯಲ್ಲಿ ದ್ವಿತೀಯ ಯ ಸ್ಥಾನ‌ ಹೊನ್ನಾವರ ತಾಲೂಕಿನ ಕಡತೋಕಾ ಜನತಾ ವಿದ್ಯಾಲಯದ ಧರ್ಮೇಂದ್ರ ಸುಬ್ರಾಯ ಗೌಡ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ ಹಾಗೂ ಅಂಕೋಲಾ ತಾಲೂಕಿನ ಸರಕಾರಿ ಪ್ರೌಢಶಾಲೆ ಸುಂಕಸಾಳದ ಪ್ರಕಾಶ ಸೀತಾರಾಮ ಗೌಡ ಎತ್ತರ ಜಿಗಿತದಲ್ಲಿ

Read More
Art & Culture Articles Karnataka Uttara Kannada

ಉಪ್ಪಿನ ಗಣಪತಿಗೆ  ಲವಣವೇ ನೈವೇದ್ಯ :

ಕುಮಟಾ : ನಗರದ ಹೃದಯ ಭಾಗದಲ್ಲಿರುವ ಉಪ್ಪಿನ ಗಣಪತಿ ದೇವಸ್ಥಾನ ಪುರಾತನವಾದುದು. ಇಲ್ಲಿಗೆ ಬರುವ ಭಕ್ತರು ಉಪ್ಪನ್ನು ಅತ್ಯಂತ ಶೃದ್ಧಾ ಭಕ್ತಿಪೂರ್ವಕದಿಂದ ನೈವೇದ್ಯವಾಗಿ ಅರ್ಪಿಸುವುದು ವಿಶೇಷ.    ತಮಗೊದಗಿದ ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕೆ ಉಪ್ಪನ್ನು ಹರಕೆರೂಪದಲ್ಲಿ ಪ್ರತಿ ವರ್ಷ ಇಲ್ಲವೇ  ವಿಶೇಷವಾಗಿ ಪ್ರತಿ ಸಂಕಷ್ಠಿಯಂದು  ಭಕ್ತರು  ಅರ್ಪಿಸುತ್ತಾರೆ. ಉಳಿದ ದಿನಗಳಲ್ಲೂ ಪೂಜಾ ಸಂದರ್ಭದಲ್ಲಿ ಉಪ್ಪನ್ನು ನೀಡುತ್ತಾರಾದರೂ ಸಂಕಷ್ಠಿಯಂದು ವಿಶೇಷವಾಗಿರುತ್ತದೆ. .  ನೈವೇದ್ಯಕ್ಕೆ ತಂದ ಉಪ್ಪನ್ನು ದೇವರ ಮುಂದೆ ತೋರಿಸಿ ಪ್ರದಕ್ಷಿಣೆ ಹಾಕಿ ದೇವಸ್ಥಾದ ಹೊರಗೆ ಸಂಗ್ರಹಕ್ಕೆ ಇಟ್ಟಿರುವ ದೋಣಿಯಲ್ಲಿ ಹಾಕುವ

Read More
Art & Culture Articles General News Karnataka Lifestyle Uttara Kannada

ಮಾತಿನ ಮೋಡಿಗಾರ ಡಾ. ಶ್ರೀಪಾದ ಶೆಟ್ಟಿಗೆ ೨೩ ನೇ ಉ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾರಥ್ಯ :

ಕುಮಟಾ : ಡಿಸೆಂಬರ್ 27 ಮತ್ತು 28ರಂದು ಹೊನ್ನಾವರದಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಅಧೀಕೃತ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ದಾಂಡೇಲಿಯ ಜಿಲ್ಲಾ ಸಾಹಿತ್ಯ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಆಯ್ಕೆ ಸರ್ವಾನುಮತದಿಂದ ನಡೆದಿದೆ ಸಭೆಯಲ್ಲಿ ಹೊನ್ನಾವರ ತಾಲೂಕು

Read More