ಕುಮಟಾ ರೇಲ್ವೆ ಸ್ಟೇಶನ್ ರಸ್ತೆಗೆ ಮೂಗು ಮುಚ್ಚಿಯೇ ಸಾಗಬೇಕು ಇಲ್ಲದಿದ್ದರೆ ವಾಕರಿಕೆ ಗ್ಯಾರಂಟಿ :
ಕುಮಟಾ : ಉತ್ತರ ಕನ್ನಡ ಜಿಲ್ಲೆಯಲ್ಲಿ ಬಸ್ ನಿಲ್ದಾಣಕ್ಕೆ ಅತೀ ಹತ್ತಿರದಲ್ಲಿರುವ ರೇಲ್ವೆಸ್ಟೇಶನ್ ಎಂದರೆ ಕುಮಟಾ ಸ್ಟೇಶನ್. ಕೇವಲ 100 ಮೀಟರ್ ಅಂತರದಲ್ಲಿರುವ ಸ್ಟೇಶನ್ ಗೆ ಆಟೋ, ಕಾರುಗಳಲ್ಲಿ ಹೋಗುವವರಿಗಿಂತ ಪಾದಚಾರಿಗಳ ಸಂಖ್ಯೆಯೇ ಅಧಿಕ. ಅದಲ್ಲದೆ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿಗೆ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿಯೇ ಸಾಗುತ್ತಾರೆ. ಇಷ್ಟೆಲ್ಲಾ ಅನುಕೂಲವಿದ್ದರೂ ಈ ಮಾರ್ಗದಲ್ಲಿ ಸಾಗುವಾಗ ಮೂಗು ಮುಚ್ಚಿಯೇ ಸಾಗಬೇಕು ಇಲ್ಲದಿದ್ದರೆ ವಾಕರಿಕೆ ಗ್ಯಾರಂಟಿ. ಬೇಕಿದ್ದರೆ ನೀವೂ ಪರೀಕ್ಷೀಸಬಹುದು. ರಾಷ್ಟ್ರೀಯ ಹೆದ್ದಾರಿಯಿಂದ ರೇಲ್ವೆ ರಸ್ತೆಗೆ ಸಾಗುತ್ತಿದ್ದಂತೆ ಎಡಗಡೆ ಪ್ಲಾಸ್ಟಿಕ್ ಕಸದ