ಬಿಲ್ವಿದ್ಯೆ ಸ್ಪರ್ಧೆಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಯುಕ್ತಾ ಗೌಡಳಿಗೆ ಬೇಕಿದೆ ಆರ್ಥಿಕ ನೆರವು :
ಕುಮಟಾ : ತಾಲೂಕಿ ದೀವಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಹರ್ಕಡೆ ಗ್ರಾಮದ ಯುಕ್ತಾ ಸತೀಶ ಗೌಡ ಈ ಶೈಕ್ಷಣಿಕ ರ್ಷದ ಬಿಲ್ವಿದ್ಯೆ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಬಿಲ್ವಿದ್ಯೆ ಕುರಿತಂತೆ ಎಲ್ಲರೂ ದಿಟ್ಟಿಸಿ ನೋಡುವಂತೆ ಮಾಡಿದ್ದಾಳೆ. ಆ ಮೂಲಕ ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದ ಲ್ಲಿ ಗುರಿಯಿಡಲು ಮುಂದಡಿ ಇಟ್ಟಿದ್ದಾಳೆ. ಆದರೆ ರಾಷ್ಟ್ರಮಟ್ಟದಲ್ಲಿ ಬಿಲ್ಲುಗಾರಿಕೆಯ ಉತ್ತಮ ಕಿಟ್ ಬಳಸಿ ಪ್ರದರ್ಶನ ನೀಡಲು ಆರ್ಥಿಕ ಹಿಂಜರಿತ ಕಟ್ಟಿಹಾಕಿದೆ. ಕುಮಾರಿ ಯುಕ್ತಾ, ಹರಕಡೆ ಮೂಲದ ಹಾಲಕ್ಕಿ