ಸಮುದ್ರದ ದಂಡೆಯಲ್ಲಿ ತಿಮಿಂಗಲದ ಶವ : ಹೊನ್ನಾವರ ಮುಗಳಿಬೀಚ್ ನಲ್ಲಿ ಘಟನೆ
ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿಯ ಅರಬ್ಬಿ ಸಮುದ್ರದ ದಡದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ಬಲೀನ್ ತಿಮಿಂಗಿಲದ ಕಳೇಬರ ಶನಿವಾರ ಪತ್ತೆಯಾಗಿದೆ.ದೇಹದ ಭಾಗಗಳು ಕೊಳೆತು ಹೋಗಿದ್ದು ಮೀನು ಕಳೇಬರ 15-16 ಮೀಟರ್ ಗಳಷ್ಟು ಉದ್ದವಿದೆ. ಸಮುದ್ರದ ದಡದಲ್ಲಿ ಬಿದ್ದಿರುವ ಭಾರೀ ಗಾತ್ರದ ಮೀನಿನ ದೇಹವನ್ನು ಕಂಡ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೀನು ಮೃತಪಟ್ಟು ಹಲವು ದಿನಗಳಾಗಿದೆ ಎಂದು