ಚಿಕಿತ್ಸೆಗೆ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ನಿಂದ 50 ಸಾವಿರ ರೂಪಾಯಿ ಆರ್ಥಿಕ ನೆರವು;
ಕುಮಟಾ: ಗೋಕರ್ಣದ ಹಾರುಮಾಸ್ಕೇರಿ ಗ್ರಾಮದ 21 ವರ್ಷದ ಸಂತೋಷ ಚಂದ್ರಕಾಂತ ಗೌಡ ಎಂಬ ಯುವಕನಿಗೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಇದರಿಂದ ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿರುವ ಸಂತೋಷನ ಕುಟುಂಬದಲ್ಲಿ ಸಂತೋಷವೇ ಇಲ್ಲದಂತಾಗಿದೆ. ವಯಸ್ಸಾದ ತಾಯಿಯ ಜೊತೆಗೆ ಇಬ್ಬರು ಕುಬ್ಜ ಸಹೋದರಿಯನ್ನು ಹೊಂದಿರುವ ಈತನೇ ಮನೆಗೆ ಆಧಾರ ಸ್ಥಂಭನಾಗಿದ್ದ. ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದ ಕುಟುಂಬಕ್ಕೆ ಮಾರಕ ಕಾಯಿಲೆ ಬಂದಿದ್ದು ಆಕಾಶವೇ