ಗಣೇಶ ಹಬ್ಬದ ಸಂಭ್ರಮದ ನಡುವೆ ಸೂತಕ ತಂದ ಗಣೇಶನ ದುಡ್ಡು
ಕಾರವಾರ : ಕರಾವಳೀಯಲ್ಲಿ ಎಡೆಬಿಡದೆ ಸುರಿದ ಭಾರೀ ಮಳೆ ಈ ವರ್ಷದ ಮಳೆಗಾಲ ಅಕ್ಷರಶಃ ವರ್ಷಧಾರೆಯಾಗಿತ್ತು. ಶಿರೂರು ಗುಡ್ಡ ಕುಸಿತ ಕರಾವಳಿಯೆಂದರೆ ಭಯಭೀತಗೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಶ್ರಾವಣ ಮಾಸವನ್ನೂ ಮಳೆ ನುಂಗಿ ಹಾಕಿದ್ದು ಈ ವರ್ಷದ ವರಮಹಾಲಕ್ಷ್ಮೀ ವೃತ ಮಹಿಳೆಯರ ಓಡಾಟಕ್ಕೂ ತಡೆಯೊಡ್ಡಿತ್ತು. ಈ ಮಳೆ ಮುಗಿದರೆ ಸಾಕಾಪ್ಪಾ ಅಂತಾ ಹಿಡಿ ಶಾಪ ಹಾಕಿದವರೂ ಇದ್ದಾರೆ. ಕರಾವಳಿಯ ರೆಡ್ ಅಲರ್ಟ ಶಾಲೆ ಕಾಲೇಜುಗಳನ್ನು ಮುಚ್ಚಿಸಿತ್ತಾದರೂ ಆ ರಜೆ ಮಕ್ಕಳಿಗೆ ಸಜೆಯಾಗಿ ಮಾರ್ಪಾಡಾಗಿತ್ತು. ಇಷ್ಟೆಲ್ಲಾ ಅವಗಢಗಳು ಕಳೆದು ಗಣೇಶ