ಕನ್ನಡ ಸೇರಿ 15 ಭಾಷೆಗಳಲ್ಲಿ ಕೇಂದ್ರ ಸರಕಾರದ ನೇಮಕಾತಿ ಪರೀಕ್ಷೆ
ನವದೆಹಲಿ : ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡಿ ಪ್ರಾದೇಶಿಕ ಭಾಷೆಯನ್ನು ಅವಸಾನಕ್ಕೆ ತಳ್ಳುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಕೇಂದ್ರ ಸರ್ಕಾರವು ಕನ್ನಡ ಸೇರಿದಂತೆ ೧೫ ಭಾಷಿಕರಿಗೆ ಸಿಹಿ ಸುದ್ದಿ ನೀಡಿದೆ. “ಯುವಕರು ಅವಕಾಶಗಳಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ಸಿಬ್ಬಂದಿ ನೇಮಕಾತಿ ಆಯೋಗದ (SSC) ಪರೀಕ್ಷೆಗಳನ್ನು ಕನ್ನಡ (Kannada) ಸೇರಿ 15 ಭಾಷೆಗಳಲ್ಲಿ ನಡೆಸಲು ಇತ್ತೀಚೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ” ಎಂದು ಕೇಂದ್ರ ಸಿಬ್ಬಂದಿ, ಕುಂದುಕೊರತೆಗಳು ಹಾಗೂ ಪಿಂಚಣಿ ಖಾತೆ ಸಹಾಯಕ ಸಚಿವ ಜಿತೇಂದ್ರ