ಕುಮಟಾ : ಪುರಾಣ ಪ್ರಸಿದ್ದ ಗೋಕರ್ಣದ ರಾಮತೀರ್ಥದ ಸನಿಹದ ಸಣ್ಣಬೇಲೆ ಕಡಲ ದಂಡೆಯ ಮೇಲೆ ಕಡಲಾಮೆಯ ಶವ ಬಿದ್ದಿದ್ದು ಕೊಳೆಯುವ ಹಂತ ತಲುಪಿರುವುದು ಇಂದು ಮುಂಜಾನೆ ಕಂಡು ಬಂದಿದೆ.
ಸುಮಾರು ಮೂರು ಅಡಿ ಉದ್ದ, ಎರಡುವರೆ ಅಡಿ ಅಗಲ, ಒಂದುವರೆ ಅಡಿ ಎತ್ತರ ಹೊಂದಿರುವ ಬೃಹತ್ ಗಾತ್ರದ ಕಡಲಾಮೆಯಾಗಿದೆ. ಇಷ್ಟೊಂದು ದೊಡ್ಡಗಾತ್ರದ ಆಮೆ ಶವವಾಗಿ ಬಿದ್ದಿದ್ದು ಅಚ್ಚರಿಗೆ ಕಾರಣವಾಗಿದೆ. ಕಡಲತೀರಕ್ಕೆಬಂದ ಸಾವಿರಾರು ಪ್ರವಾಸಿಗರು ಆಮೆಯನ್ನು ನೋಡಿ ಅಚ್ಚರಿ ಪಡುತ್ತಾ ಸೆಲ್ಪಿ ತೆಗೆದುಕೊಳ್ಳುತ್ತಿರುವುದು ಕಂಡು ಬಂತು. ಶವವನ್ನು ಅಲ್ಲಿಯೇ ಬಿಟ್ಟರೆ ನಾಯಿಗಳು ಬಂದು ಹರಿದು ತಿನ್ನುವ ಅಪಾಯವಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ನೋಡಿ ಪರೀಕ್ಷಿಸಿದ ಬಳಿಕವಷ್ಟೇ ಆಮೆಯ ಸಾವಿಗೆ ನಿಖರವಾದ ಕಾರಣ ತಿಳಿಯ ಬಹುದು.