ಕುಮಟಾ : ಇತ್ತೀಚೆಗೆ ತಾಲೂಕಿನ ಮಿರ್ಜಾನ್ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮೂರೂರು ಪ್ರಗತಿ ವಿದ್ಯಾಲಯದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿ ತಾಲೂಕು ಮಟ್ಟದ ಕ್ರೀಡಾಕೂಟ ಕ್ಕೆ ಆಯ್ಕೆ ಮಾಡುವುದರ ಮೂಲಕ ಶಾಲೆಯ ಕೀರ್ತಿ ಯನ್ನು ಹೆಚ್ಚಿಸಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ತರಬೇತು ನೀಡಿದ ದೈಹಿಕ ಶಿಕ್ಷಕ ಎಂ. ಐ ಭಟ್ ಸಂತಸ ವ್ಯಕ್ತಪಡಿಸಿದ್ದಾರೆ.
ಯೋಜನಾ ಗೌಡ ಉದ್ದ ಜಿಗಿತ, ತ್ರಿವಿಧ ಜಿಗಿತ ಪ್ರಥಮ ಹಾಗೂ 200 ಮೀ. ಓಟ ತೃತೀಯ, ಅರುಂಧತಿ ಗೌಡ ಜಾವಲಿನ್ ಎಸೆತ ಪ್ರಥಮ, ತೇಜಸ್ವಿನಿ ಗೌಡ 800 ಮೀ ಓಟ ದ್ವಿತೀಯ, ಮಾಧುರಿ ಗೌಡ 400 ಮೀ ಓಟ ದ್ವಿತೀಯ, ಮಾನಸಾ ಗೌಡ ಹ್ಯಾಮರ್ ಎಸೆತ ದ್ವಿತೀಯ, ದೇವಕಿ ಗೌಡ ಎತ್ತರ ಜಿಗಿತ ದ್ವಿತೀಯ, 3000 ಮೀ ಓಟ ತೃತೀಯ, ಮೇಘಾ ಗೌಡ 1500 ಮೀ ಓಟ ತೃತೀಯ, ಪದ್ಮಾ ಗೌಡ ಜಾವಲಿನ್ ಎಸೆತ ತೃತೀಯ, ಕವಿತಾ ಗೌಡ ಚಕ್ರ ಎಸೆತ ತೃತೀಯ, ಗಣೇಶ ಗೌಡ 1500 ಮೀ ಓಟ ದ್ವಿತೀಯ, ಎತ್ತರ ಜಿಗಿತ ತೃತೀಯ, ದೀಪಕ್ ಗೌಡ ತ್ರಿವಿಧ ಜಿಗಿತ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದ ಗುಂಪಿನಾಟದಲ್ಲಿ ವಾಲಿಬಾಲ್ ಮತ್ತು ಥ್ರೋ ಬಾಲ್ ನಲ್ಲಿ ದ್ವಿತೀಯ, ಬಾಲಕರ ವಿಭಾಗದ ಗುಂಪಿನಾಟ ವಾಲಿಬಾಲ್ ಪ್ರಥಮ, ಥ್ರೋ ಬಾಲ್ ದ್ವಿತೀಯ ಸ್ಥಾನ ಗಳನ್ನು ಪಡೆಯುವುದರ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
Leave feedback about this