ಸುಪ್ರೀಯಾ ಶಂಕರ್ ಗೌಡ ಸತತ ಎರಡನೇ ಬಾರಿ ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ;
ಕುಮಟಾ; ದಕ್ಷಿಣ ಕನ್ನಡದ ರಾಮಕೃಷ್ಣ ಪ್ರೌಢಶಾಲೆ ಕೊಂಬಿಟ್ಟು ಪುತ್ತೂರು ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷ ವಯೋಮಿತಿ ಒಳಗಿನ ಪ್ರೌಢ ಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಮೂರೂರಿನ ಪ್ರಗತಿ ವಿದ್ಯಾಲಯದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾದ ಸುಪ್ರಿಯಾ ಶಂಕರ್ ಗೌಡ ಅಥ್ಲೆಟಿಕ್ ವಿಭಾಗದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಓಟದ ಗುರಿಯನ್ನು ಒಂದು ನಿಮಿಷ 02.3 ಸೆಕೆಂಡ್ ನಲ್ಲಿ ದಾಖಲಿಸಿ ಗುರಿ ತಲುಪಿದ್ದಾಳೆ. ಕಳೆದ ವರ್ಷ