ಮತ್ತೆ ಚರ್ಚೆಗೆ ಬಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು: ಡಾ. ಕುಸುಮ ಸೊರಬ ರಂತೆ ಗಟ್ಟಿ ನಿಲುವು ತಾಳುವರೇ ಡಾ. ಜಿ. ಜಿ. ಹೆಗಡೆ
ಕುಮಟಾ; ಉತ್ತರ ಕನ್ನಡ ಜಿಲ್ಲೆ ಇಲ್ಲಿಯವರೆಗೂ ಯಾವುದೇ ಹೋರಾಟಕ್ಕೂ ಉತ್ತರ ಕಾಣದ ಜಿಲ್ಲೆಯಾಗಿದೆ ಎಂಬುದು ಜಾಗತಿಕ ಸತ್ಯ. ಕರಾವಳಿ, ಬಯಲು ಸೀಮೆ ಮತ್ತು ಮಲೆನಾಡು ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡ ಭೌಗೋಳಿಕವಾಗಿ ಅತ್ಯಂತ ವಿಸ್ತಾರ ಹಾಗೂ ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾದ ಜಿಲ್ಲೆ. ಇಲ್ಲಿಯ ನೆಲ, ಜಲ ಬಳಸಿಕೊಂಡು ಇಲ್ಲಿನ ಜನರಿಗೆ ಮಾರಕವಾಗುವ ಹಲವಾರು ಯೋಜನೆಗಳು ಪ್ರಬಲ ವಿರೋಧದ ನಡುವೆಯೂ ಸ್ಥಾಪಿತಗೊಂಡಿವೆ. ಕೈಗಾ ಅಣು ವಿದ್ಯುತ್ ಸ್ಥಾವರ ಸಂದರ್ಭದಲ್ಲಿ ಯೋಜನೆಯನ್ನು ವಿರೋಧಿಸಿ ಪರಿಸರದ ಅಕ್ಕ ಡಾ ಕುಸುಮ ಸೊರಬ ಹಲವಾರು